


ಪುತ್ತೂರು: ಕೊಲ್ಕತ್ತಾದಲ್ಲಿರುವ ದರಾ ದಿಯಾ ಪೈನ್ ಕ್ಲಿನಿಕ್ ನಲ್ಲಿ ಡಾ. ಗೌತಮ್ ದಾಸ್ ಅವರ ಮಾರ್ಗದರ್ಶನದಲ್ಲಿ ರೋಗಿಗಳ ದೀರ್ಘಕಾಲದ ನೋವನ್ನು ನಿವಾರಿಸುವ ಅಥವಾ ಕಡಿಮೆ ಮಾಡಲು ಅನುಕೂಲಕರವಾದ ಫಿಲೋಷಿಪ್ ಇನ್ ಪೈನ್ ಮೆಡಿಸಿನ್ ಪದವಿಯನ್ನು ಡಾ. ಪ್ರಜ್ಞ ಜಯರಾಮ್ ಪೂರ್ಣಗೊಳಿಸಿದ್ದಾರೆ. ಅವರು ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ ಸಂತ ಫಿಲೋಮಿನಾ ಪದವಿ ಶಿಕ್ಷಣ ತದನಂತರ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಶಿಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಪ್ರಸ್ತುತ ಬೆಂಗಳೂರಿನ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತಿ ಡಾ. ಚಿರಂತ್ ಮಕ್ಕಳ ತಜ್ಞರಾಗಿದ್ದು ಅದೇ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಪ್ರಜ್ಞ ಜಯರಾಮ್ ಅವರು ಪುತ್ತೂರಿನ ದರ್ಬೆ ನಿವಾಸಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಜಯರಾಮ್ ಮಡಪ್ಪಾಡಿ ಹಾಗೂ ತ್ರಿವೇಣಿ ದಂಪತಿಯ ಪುತ್ರಿ.
