


ಪುಣಚ ಗ್ರಾಮದ ಪಾಲಸ್ತಡ್ಕ ಎಂಬಲ್ಲಿ ವ್ಯವರಿಸುತ್ತಿದ್ದ ಆನಂದ ಅವರ ಮಾಲಕತ್ವದ ಇಂಟರ್ಲಾಕ್ ಫ್ಯಾಕ್ಟರಿಯ ಸಿ ಸಿ ಟಿವಿ ಯನ್ನು ಪುಡಿಗೈದು, ಬಾಗಿಲು ಮುರಿದು, ಹಿಂದೂಗಳ ಆರಾಧ್ಯ ದೇವಿ ಮಹಿಷಮರ್ದಿನಿಯ ಮತ್ತು ದೇವರ ಫೋಟೋಗಳಿಗೆ ಬೆಂಕಿ ಕೊಟ್ಟು ನೀಚ ಬುದ್ದಿ ತೋರಿಸಿದ ಮತಾಂದ ಜಿಹಾದಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಖಂಡನಾ ಸಭೆ ಮತ್ತು ಸಾರ್ವಜನಿಕ ಪ್ರಾರ್ಥನೆ ನಡೆಯಿತು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಫದ ರವೀಂದ್ರ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ರಂಗಮೂರ್ತಿ ಪುಣಚ, ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮಾರಪ್ಪ ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತಡ್ಕ, ಭಾ ಜ ಪ ಮುಖಂಡರಾದ ದಯಾನಂದ ಉಜಿರೆಮಾರ್, ಹರಿಪ್ರಸಾದ್ ಯಾದವ್, ಕಿರಣ್ ಬಲ್ನಾಡ್, ವಿಶ್ವಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಹಾಗೂ ಸಹಸಂಯೋಜಕ್ ಪ್ರವೀಣ್ ಕಲ್ಲೇಗ, ಬಜರಂಗದಳ ಪುತ್ತೂರು ಸಂಯೋಜಕ್ ಜಯಂತ್ ಕುಂಜೂರು ಪಂಜ, ಸಂದೀಪ್ ಸಿಂಗಾಣಿ, ಹಿಂದೂ ಜಾಗರಣ ವೇದಿಕೆ ಮುಖಂಡ ಅಕ್ಷಯ್ ರಜಪೂತ್ ಹಾಗೂ ಸಮಸ್ತ ಊರಿನ ಭಕ್ತಾಧಿಮಾನಿಗಳು ಉಪಸ್ಥಿತರಿದ್ದರು.
