
ಶಿವಮೊಗ್ಗ: ಯುವತಿ ಮೇಲೆ ಖಾಸಗಿ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಬಳಿ ನಡೆದಿದೆ.

ದುಮ್ಮಳ್ಳಿ ತಾಂಡಾದ ಕವಿತಾ (27) ಮೃತ ದುರ್ದೈವಿ. ಕೆಲಸಕ್ಕೆಂದು ಅಣ್ಣನ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಲವಗೊಪ್ಪದಲ್ಲಿ ಮತ್ತೊಂದು ಬೈಕ್ ಇವರಿಗೆ ಡಿಕ್ಕಿಯಾಗಿದೆ. ಪರಿಣಾಮ ಯುವತಿ ಹಾಗೂ ಆಕೆಯ ಅಣ್ಣ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಬಂದ ಖಾಸಗಿ ಬಸ್ ಯುವತಿಯ ಮೇಲೆ ಹರಿದು ಆಕೆ ಅಲ್ಲೇ ಉಸಿರು ಚೆಲ್ಲಿದ್ದಾಳೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
