ಬ್ಯಾಗ್ ಜೊತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಜಯಂತ್.ಟಿ

ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣದ ವಿಚಾರಣೆಗಾಗಿ ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಬ್ಯಾಗ್ ಜೊತೆ ಜಯಂತ್.ಟಿ ಬಂದು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಂಜೆ 3:20 ಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿಯ ಕಾರಿನಲ್ಲಿ ಜಯಂತ್.ಟಿ ಬಂದು ಹಾಜರಾಗಿದ್ದಾರೆ ಎನ್ನಲಾಗಿದೆ. ಈತ ಎಸ್ಐಟಿ ಕಚೇರಿಗೆ ವಿಚಾರಣೆಗೆ ಬರುವ ವೇಳೆ ಆತನ ಕೈಯಲ್ಲಿ ಒಂದು ಬ್ಯಾಗ್ ಇತ್ತು ಅನ್ನುವ ಮಾಹಿತಿ ಕೆಲವು ಮೂಲಗಳಿಂದ ಲಭ್ಯವಾಗಿದೆ. ಅದರ ಜೊತೆಗೆ ಆ ಬ್ಯಾಗ್ ನಲ್ಲಿ ಯಾವ ಮಾಹಿತಿಗಳು ಇರಬಹುದೆಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

News Editor

Learn More →

Leave a Reply

Your email address will not be published. Required fields are marked *