
ಕಾರ್ಕಳ : ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಎಲಿಯಾಳ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ 7 ಮಂದಿ ಆರೋಪಿಗಳನ್ನು ಏ. 27ರಂದು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.


ಪಳ್ಳಿ ಗ್ರಾಮದ ಬೊಬ್ಬರಪಲ್ಕೆಯ ಗಣೇಶ (38), ಕೌಡೂರಿನ ಮಂಜುನಾಥ (33), ಬೈಲೂರಿನ ರಾಕೇಶ (24), ಕಡಂದಲ್ಕೆಯ ಗಣೇಶ (46), ಉಡುಪಿಯ ಬೇಲೆಕೆರೆಯ ಸೋಮ ಸುಂದರ (45), ಸಂಜೀವ ಬಾಣಲೆ, ಅಖಿಲೇಶ್ ಕಣಜಾರು ಮತ್ತು ಅವಿನಾಶ್ @ ಜನ್ನ ಬೈಲೂರು ಬಂಧಿತ ಆರೋಪಿಗಳು.
ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 33,035 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
