











ಅಕ್ರಮ ವೈದ್ಯಕೀಯ ಕ್ಲಿನಿಕ್ ಗಳ ಮೇಲೆ ,,! ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ದಾಳಿ,,,
ಮಾಹಿತಿ ಹಕ್ಕು ಬಳಕೆದಾರ ಹಾಗೂ ಸಾಮಾಜಿಕ ಹೋರಾಟಗಾರರಿಂದ ಕೊನೆಗೆ ಬಯಲಾಯ್ತು ಅಕ್ರಮವಾಗಿ ನಡೆಸ್ತಾ ಇದ್ದ ವೈದ್ಯಕೀಯ ಚಟುವಟಿಕೆ,,,
ಖಚಿತ ಮಾಹಿತಿ ಆಧರಿಸಿ ಬಂದ್ ಆದ ನಕಲಿ ಹೆಲ್ತ್ ಸೆಂಟರ್ ಗಳು,,,
ಹೌದು,,,ವೈದ್ಯೋ ನಾರಾಯಣ ಹರಿಃ ಎನ್ನುವ ವೇದೋಕ್ತಿಯೊಂದಿಗೆ ವೈದ್ಯ ವೃತ್ತಿ ಮಾಡುತ್ತಿದ್ದರನ್ನ ಹಿಂದೆ ದೇವರಿಗೆ ಹೋಲಿಕೆ ಮಾಡಿ, ದೇವರು ಕೈ ಚೆಲ್ಲಿದರು,, ವೈದ್ಯ ಕೈ ಹಿಡಿಯುತ್ತಾನೆ ಎನ್ನುವ ನಂಬಿಕೆಯಿಂದ ಅದೇಷ್ಟೋ ಜನ ವೈದ್ಯರನ್ನ ಗೌರವದಿಂದ ಆಧರಿಸಿ ಪೂಜಿಸಿದ ನಿದರ್ಶನಗಳಿವೆ.
ಆದರೆ,,,ಈಗಿನ ದುನಿಯಾ ಬರೀ ಹಣದ ಮೇಲೆ ನಿಂತಿರೋದ್ರಿಂದ ಯಾರನ್ನ ಯಾರು ನಂಬಕಾಗದೇ ಇರೋ ತರ ಆಗೋಗ್ಬಿಟ್ಟಿದೆ.
ಬಡ ಜೀವಗಳನ್ನ ಉಳಿಸೋಕೆ ಅಂತ ಕೆಲವೊಂದಿಷ್ಟು ದೇವರ ರೂಪದ ವೈದ್ಯರು ಇದ್ರೇ, ಇದನ್ನೇ ಬಂಡವಾಳ ಮಾಡ್ಕೊಂಡು
ಹಣ ಬರುವ ಮೂಲ ನೋಡಿ ವ್ಯವಹಾರಕ್ಕೆ ನಿಂತಿರೋ ನಕಲಿ ವೈದ್ಯರು ತಂಡ ಒಂದೇಡೆ,,,
ಇವರಿಗೆ ಬೇಕಿರೋದು ರೋಗಿಯ ರೋಗ ವಾಸಿಯಲ್ಲಾ ಇವರಿಗೆ ಬೇಕಿರೋದು ಹಣ,,ರೋಗಿಯಿಂದ ಬಂದಷ್ಟು ದೋಚೋದೇ ಒಂದು ಕೆಲ್ಸ ಆಗೋಗಿದೆ.
ನಿನ್ನೆ ಮೊನ್ನೆ ಒಂದು ಟೇಬಲ್ ನಿಂದ ಪ್ರಾರಂಭಿಸಿದ ಆಸ್ಪತ್ರೆಗಳು ಇಂದು ದೊಡ್ಡ ಮಟ್ಟದ ಕ್ಲಿನಿಕ್ ಗಳಾಗಿ ಪರಿವರ್ತನೆಯಾಗಿವೆ.
ರಾಜ್ಯ ಸರಕಾರ ಅದೇಷ್ಟೋ ಕಟ್ಟು ನಿಟ್ಟಿನ ಆದೇಶ ನೀಡಿ ಆರ್ ಎಂ ಪಿ ವೈದ್ಯರ ಕ್ಲಿನಿಕ್ ಬಂದ್ ಮಾಡುವಂತೆ ಸೂಚಿಸಿದರು ಇನ್ನೂ ರಾಜ್ಯದಲ್ಲಿ ಆರ್ ಎಂ ಪಿಗಳ ಹಾವಳಿ ನಿಂತಿಲ್ಲಾ, ಮನೆಗಳನ್ನೇ ಕ್ಲಿನಿಕ್ ಆಗಿ ಪರಿವರ್ತನೆ ಮಾಡಿ, ಔಷದ, ಇಂಜೆಕ್ಷನ್ ಸೇರಿದಂತೆ ಇನ್ನಿತರೇ ಚೀಟಿಗಳನ್ನು ಬರೆದು ತಾವೇ ತೆರದಿರೋ ಮೆಡಿಕಲ್ ನಲ್ಲಿ ತರುವಂತೆ ಸೂಚಿಸ್ತಾರೇ,, ಒಂದಕ್ಕೆ ಎರಡರಷ್ಟೂ ದೋಚತಾರೇ,,
ಜಗತ್ತಿನ ನಿಯಮ ಎಲ್ಲಾದರಲ್ಲೂ ಚೌಕಾಸಿ ಇದೆ, ಇದೊಂದನ್ನ ಹೊರತು ಪಡಿಸಿ ಎಂದು ತಿಳಿದವರು ಇದಕ್ಕೆ ನಿಂತಿದ್ದಾರೆ. ಇಂದು ಅವರು ದೊಡ್ಡ ದೊಡ್ಡ ಬಂಗ್ಲೆ, ಕಾರು, ಐಷಾರಾಮಿ ಜೀವನದ ದೊರೆಗಳಾಗಿದಾರೇ ಅನ್ನೋದರಲ್ಲಿ ಎರಡು ಮಾತಿಲ್ಲಾ,,
ಹೌದು ಅದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಬೆಂಗಳೂರು ನಗರದ ವಿದ್ಯಾಮಾನ್ಯ ನಗರದಲ್ಲಿ ಅಕ್ರಮವಾಗಿ ನಡೆಸ್ತಾ ಇದ್ದ ಕ್ಲಿನಿಕ್ ಗಳು ಈಗ ಶಾಶ್ವತ ಬಂದ್ ಆಗಿವೆ.
ಅದೇ ವಿದ್ಯಾಮಾನ್ಯನಗರದ ಶ್ರೀ ಶಂಕರ್ ಹೇಲ್ತ್ ಕೇರ್ ಹಾಗೂ ಶ್ರೀ ಚೆಲುವ ನಾರಾಯಣ ಸ್ವಾಮಿ ಎರಡು ಕ್ಲಿನಿಕಲ್ ನಲ್ಲಿ ಅಕ್ರಮವಾಗಿ ವೈದ್ಯಕೀಯ ಚಟುವಟಿಕೆ ನಡೆಸ್ತಾ ಇರೋದನ್ನ ಮಾಹಿತಿ ಹಕ್ಕು ಬಳಕೆದಾರ ಹಾಗೂ ಸಾಮಾಜಿಕ ಹೋರಾಟಗಾರ ಮೋಹನ್ ಎನ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡ್ತಿದಂತೆ ದೌಡಾಯಿಸಿದ ಇಲಾಖೆ ಪರಿಶೀಲನೆ ನಡೆಸಿ ಬಂದ್ ಮಾಡಲು ಸೂಚಿಸಿ ಕ್ರಮ ಜರುಗಿಸಲು ಮುಂದಾಗಿದೆ.
ಈ ಅಧಿಕಾರಿಗಳ ತಂಡದಲ್ಲಿ ಬೆಂಗಳೂರು ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ರವೀಂದ್ರನಾಥ್ ಮೇಟಿ ಸರ್ ರವರ ತಂಡ ದಾಳಿ ನಡೆಸಿ ನಕಲಿ ಆಸ್ಪತ್ರೆಗಳಿಗೆ ಬೀಗ ಜಡಿದು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಕ್ಕೆ ಸಾಮಾಜಿಕ ಹೋರಾಟಗಾರ ಮೋಹನ್ ಎನ್ ಅಭಿನಂದಿಸಿ ತಂಡಕ್ಕೆ ಶುಭಕೋರಿದ್ದಾರೆ🙏💐


