
ಪುತ್ತೂರು
ಪುತ್ತಿಲ ಪರಿವಾರ ಹಾಗೂ ವಿಶ್ವ ಹಿಂದೂ ಪರಿಷದ್ ನ ಕಾರ್ಯಕರ್ಯರ ನಡುವೆ ಹೊಯ್ ಕೈ
ವಿಶ್ವ ಹಿಂದೂ ಪರಿಷದ್ ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಘಟನೆ

ಕಾರ್ಯಕ್ರಮ ನಡೆಯುತ್ತಿರುವಾಗ್ಲೇ ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ
ಭೂಮಿ ಪೂಜೆಗೆ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದಕ್ಕೆ ಕೆರಳಿದ ವಿಎಚ್ ಪಿ ಕಾರ್ಯಕರ್ತರು
ಅರುಣ್ ಪುತ್ತಿಲ ಆಗಮಿಸಬಾರದು ಎಂದು ತಡೆಯೊಡ್ಡಿದ ವಿಎಚ್ ಪಿ ಕಾರ್ಯಕರ್ತರು
ರಣಾಂಗಣವಾದ ವಿಎಚ್ ಪಿ ನೂತನ ಜಿಲ್ಲಾ ಕಾರ್ಯಲಯದ ಭೂಮಿ ಪೂಜೆ
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರಿನಲ್ಲಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ
ಈ ವೇಳೆ ಅರುಣ್ ಕುಮಾರ್ ಪುತ್ತಿಲ ಆಂಡ್ ಟೀಂ ಹಿಂದೂ ಸಂಘಟನೆಗಳಿಗೆ ಹಾಗೂ ಸಂಘ ಪರಿವಾರಕ್ಕೆ ನಿಂದಿಸಿದ್ದರು ಎಂಬ ಆರೋಪ
ಹಾಗಾಗಿ ಪುತ್ತಿಲ ಆಂಡ್ ಟೀಂ ಯವುದೇ ಕಾರಣಕ್ಕೂ ನಮ್ಮ ವಿಎಚ್ ಪಿ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದ್ದ ಸಂಘಟಕರು
ಪುತ್ತಿಲ ಪಕ್ಷೇತರನಾಗಿ ಸ್ಪರ್ಧಿಸಿದ್ದಾಗಲೇ ವಿಎಚ್ ಪಿ ಕಾರ್ಯಕರ್ತರು ಹೇಳಿದ್ದರು
ಇದಾದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬಿಕ್ಕಟ್ಟು ಶಮನಗೊಂಡಿತ್ತು
ಆದ್ರೆ ವಿಎಚ್ ಪಿ ನಡುವಿನ ಸಮರ ಹಾಗೆಯೇ ಉಳಿದಿತ್ತು
ಮತ್ತೆ ಇಂದು ವಿಎಚ್ ಪಿ ನೂತನ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಉಲ್ಭನಗೊಂಡ ಸಮರ
ಪುತ್ತಿಲ ಪರಿವಾರ ಹಾಗೂ ವಿಎಚ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ


