
ಪುತ್ತೂರು: ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ನ.೧ ರಂದು ಕನ್ನಡ ಭುವನೇಶ್ವರಿಯ ಮೆರವಣಿಗೆ ಜತೆಗೆ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ಮಂಗಳವಾರ ಸಂಜೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಉಪ ತಹಶೀಲ್ದಾರ್ ಸುಲೋಚನಾ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ೧೫ ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವವನ್ನು ಪುತ್ತೂರಿನಲ್ಲಿ ಮೆರವಣಿಗೆಗಳೊಂದಿಗೆ ಅದ್ದರೂರಿಯಾಗಿ ಆಚರಿಸಲಾಗುತ್ತಿತ್ತು. ಬಳಿಕ ಅದು ನಿಂತು ಹೋಗಿತ್ತು. ಕಳೆದ ೨ ವರ್ಷಗಳಿಂದ ಅದನ್ನು ಮರು ಆರಂಭಿಸಲಾಘಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರನ್ನು ಸೇರಿಸಿಕೊಂಡು ಅಭಿಪ್ರಾಯ, ಸಹಕಾರ ಪಡೆದುಕೊಂಡು ಆಚರಿಸಲಾಗುತ್ತಿದೆ. ಕಳೆದ ವರ್ಷ ಸುವರ್ಣ ಸಂಭ್ರಮದಲ್ಲಿ ೫೦ ಸಂಘ ಸಂಸ್ಥೆಗಳು ಸೇರಿಕೊಂಡಿದ್ದವು. ಈ ಬಾರಿಯೂ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರನ್ನು ಸಂಪರ್ಕಿಸಲಾಗುವುದು ಎಂದರು.
ಮಕ್ಕಳು ಮಾತ್ರವಲ್ಲದೆ ಸಾರ್ವಜನಿಕರನ್ನೂ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ.ಗಳು, ಯುವಕ-ಯುವತಿ ಮಂಡಲಗಳನ್ನು ಸಂಪರ್ಕಿಸುವುದು, ಮೆರವಣಿಗೆ ಖರ್ಚು-ವೆಚ್ಚಗಳ ಪಟ್ಟಿ ತಯಾರಿಸುವುದು, ಆಕರ್ಷಕ ಭುವನೇಶ್ವರಿಯ ಮೆರವಣಿಗೆ ನಡೆಸುವುದು ಮೊದಲಾದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ದರ್ಬೆಯಲ್ಲಿ ೭.೩೦ ಕ್ಕೆ ಸೇರಿ ೮ ಗಂಟೆಗೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಶಾಸಕ ಅಶೋಕ್ ರೈ ಅವರ ಮೂಲಕ ಚಾಲನೆ ನೀಡುವುದು. ಸಹಾಯಕ ಆಯುಕ್ತರು, ಅಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ೮.೫೦ ಕ್ಕೆ ಕಿಲ್ಲೆ ಮೈದಾನಕ್ಕೆ ತಲುಪಿ ಬಳಿಕ ಧ್ವಜಾರೋಹಣ ನಡೆಸುವುದು, ಅನಂತರ ಪುರಭವನದಲ್ಲಿ ಸಭಾ ಕಾರ್ಯಕ್ರಮ ನಡೆಸುವ ಕುರಿತು ಸಭೆಯಲ್ಲಿ ತಿಳಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶೀಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಶಿಕ್ಷಣ ಇಲಾಖೆಯ ಹರಿಪ್ರಸಾದ್, ಕಂದಾಯ ಇಲಾಖೆಯ ದಯಾನಂದ ಉಪಸ್ಥಿತರಿದ್ದರು.
ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕ ಪ್ರಮುಖರಾದ ಡಾ. ಶ್ರೀಪತಿ ರಾವ್, ಡಾ. ರವಿಪ್ರಕಾಶ್, ರೆ.ವಿಜಯ ಹಾರ್ವಿನ್, ಉಲ್ಲಾಸ್ ಪೈ, ಪದ್ಮಾನಾಭ ಶೆಟ್ಟಿ, ಮಲ್ಲಿಕಾ ಜೆ. ರೈ, ಮೌನೇಶ್ ವಿಶ್ವಕರ್ಮ, ಪ್ರೇಮಲತಾ ರಾವ್, ಸಿದ್ದೀಕ್ ನೀರಾಜೆ, ಅಶಿವನಿಕೃಷ್ಣ ಮುಳಿಯ, ಹರಿಣಾಕ್ಷಿ ಜೆ. ಶೆಟ್ಟಿ, ವೇದಾವತಿ, ಅಶ್ವಿನ್ ಶೆಟ್ಟಿ, ದಿನೇಶ್ ಸಾಲ್ಯಾನ್, ಕಲಾವಿದ ಕೃಷ್ಣಪ್ಪ, ರಾಜೇಶ್ ಮೋಹನ್ದಾಸ್, ಅಬೂಬಕ್ಕರ್ ಮಲಾರ್, ಸಂತೋಷ್ ಕುಮಾರ್, ನೂರುದ್ದೀನ್ ಸಾಲ್ಮರ, ನಾರಾಯಣ ಕುಂಬ್ರ, ಶಾಂತಾ ಕುಂಟಿನಿ, ಮಹಮ್ಮದ್ ಶಾ, ಭಾಗ್ಯೇಶ್ ರೈ, ತೇಜಸ್ವನಿ ರಾಜೇಶ್ ಮೊದಲಾದವರು ಪಾಲ್ಗೊಂಡು ಸಲಹೆ -ಸೂಚನೆ ನೀಡಿದರು.


