
ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರಾದ ಸನ್ಮಾನ್ಯ ನಳಿನ್ ಕುಮಾರ್ ಕಟೀಲ್ ಅವರು ಮುಂಬೈ ಪ್ರವಾಸದಲ್ಲಿದ್ದಾರೆ.
ಟೀಮ್ ಯುವ ಬ್ರಿಗೇಡ್, ಮೀರಾ ಭಾಯಂದರ್ ಇದರ ವತಿಯಿಂದ ನ್ಯಾಯವಾದಿ ಶ್ರೀ ರವಿ ವ್ಯಾಸ್ ಇವರ ನೇತೃತ್ವದಲ್ಲಿ ಹಾಗೂ ಹಿಂದುತ್ವವಾದಿ ಶ್ರೀ ಮಹೇಶ್ ಶೆಟ್ಟಿ ತೆಳ್ಳಾರ್ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಿಗುತ್ತು ಇವರ ಮುಂದಾಳತ್ವದಲ್ಲಿ ಹಾಗೂ ಟೀಮ್ ಯುವ ಬ್ರಿಗೇಡ್ , ಮೀರಾ ಭಾಯಂದರ್ ಇದರ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಪಣಿಯೂರು ಮತ್ತು ಸರ್ವ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರದಲ್ಲಿ, ಮಾಜಿ ಸಂಸದರಾದ ಶ್ರೀ ಗೋಪಾಲ್ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಮೇವಾರ್ ವಾಟಿಕ, ಮೀರಾ ಭಾಯಂದರ್ ಇಲ್ಲಿ ಆಯೋಜಿಸಲ್ಪಟ್ಟ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ತುಳು ಕನ್ನಡಿಗರ ಸಮಕ್ಷಮದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.




