
ಪುತ್ತೂರು: ಗುಣಮಟ್ಟದ ಆಧುನಿಕ ಶಿಕ್ಷಣ ನೀಡುವ ಉದ್ದೇಶದೊಂದಿಗೆ ೬೬ ವರ್ಷಗಳ ಹಿಂದೆ ಮೊ.ಆ್ಯಂಟೊನಿ ಪತ್ರಾವೋ ಅವರು ಸ್ಥಾಪಿಸಿದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರಾವಳಿ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ ಕಾಲೇಜಿನ ಉನ್ನತ ಗುಣಮಟ್ಟ ಪರಿಗಣಿಸಿ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ ಎಂದು ಕಾಲೇಜಿನ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನಸ್ಮತ್ತು ಪ್ರಾಂಶುಪಾಲರಾದ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಶ್ರೇಣೀಕರಣ ಸಂಸ್ಥೆ(ನ್ಯಾಕ್)ಯಿAದ ಸತತ ೩ ಬಾರಿ ಎ ಗ್ರೇಡ್ ಮಾನ್ಯತೆ ಪಡೆದಿರುವ ಸಂಸ್ಥೆಯು, ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಐಎಸ್ಒ ೯೦೦೧:೨೦೧೫ ಪ್ರಮಾಣೀಕರಣ ಪಡೆದುಕೊಂಡಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ನೀಡುತ್ತಿರುವ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಬೇಕೆಂದು ೨೦೨೩ರ ನವೆಂಬರ್ನಲ್ಲಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿತ್ತು. ಯುಜಿಸಿ ಆದೇಶದ ಮೇರೆಗೆ ಪ್ರೊ. ಪಿ.ಎಲ್. ಧರ್ಮ ನೇತೃತ್ವದ ಮಂಗಳೂರು ವಿ.ವಿ. ಸ್ಥಾಯಿ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೋಧನೆ ನಡೆಸಿ, ಸ್ವಾಯತ್ತ ಸ್ಥಾನಮಾನ ನೀಡಬಹುದೆಂದು ಯುಜಿಸಿಗೆ ಶಿಫಾರಸು ಮಾಡಿತ್ತು. ಇದರಂತೆ ಯುಜಿಸಿ ಅನುಮೋದನೆ ನೀಡಿತ್ತು. ಮಂಗಳೂರು ವಿ.ವಿ. ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅಂಗೀಕರಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಸರಕಾರ ಇದೀಗ ಅನುಮತಿ ನೀಡಿದ ಬಳಿಕ ಮಂಗಳೂರು ವಿವಿಯು ಅಧಿಸೂಚನೆ ಹೊರಡಿಸಿದೆ ಎಂದರು.
ಸ್ವಾಯತ್ತತೆಗಾಗಿ ಕಾಲೇಜಿನಲ್ಲಿ ಸುಸಜ್ಜಿತ ಕಂಟ್ರೋಲ್ ರೂಮ್, ಬೋರ್ಡ್ ರೂಮ್ ಹಾಗೂ ಇನ್ನಿತರ ಭೌತಿಕ ಸೌಲಭ್ಯಗಳು, ಪರೀಕ್ಷಾಂಗ ಮುಂತಾದ ವಿಭಾಗಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ. ಶಿಕ್ಷಣ ಮಂಡಳಿ, ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಗಳು ಕಾರ್ಯ ನಿರ್ವಹಿಸಲಿವೆ. ಕಾಲೇಜಿನಲ್ಲಿ ಪದವಿ ವಿಭಾಗದಲ್ಲಿ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿಬಿಎ, ಬಿಸಿಎ ಹಾಗೂ ಬಿಸಿಎ (ಎಐ -ಎಂಎಲ್) ಕೋರ್ಸ್ಗಳನ್ನು ನೀಡಲಾಗುತ್ತಿದೆ.
ಸ್ನಾತಕೋತ್ತರ ವಿಭಾಗದಲ್ಲಿ ಎಂಎಸ್ಡಬ್ಲ್ಯೂ, ಎಂಕಾA, ಹಾಗೂ ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಕೋರ್ಸ್ ನೀಡಲಾಗುತ್ತಿದೆ. ಈ ಶೈಕ್ಷಣೆಕ ವರ್ಷದಿಂದ ಎಂಸಿಎ ಕೋರ್ಸ್ ಪ್ರಾರಂಭಿಸಲಾಗುವುದು. ಬಿಬಿಎ, ಬಿಸಿಎ ಹಾಗೂ ಎಂಸಿಎ ಕೋರ್ಸ್ಗಳಿಗೆ ಎಐಸಿಟಿಇ ಮಾನ್ಯತೆ ದೊರಕಿದೆ ಎಂದರು.
೬೦ ಕ್ರಿಯಾತ್ಮಕ ಘಟಕಗಳು:
ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಎನ್ಎಐಎನ್) ನಮ್ಮ ಸಂಸ್ಥೆಯನ್ನು ಎನ್ಎಐಎನ್ ಅತಿಥೇಯ ಸಂಸ್ಥೆಯಾಗಿ ಆಯ್ಕೆ ಮಾಡಿದೆ. ಕಾಲೇಜಿನಲ್ಲಿ ೬೦ಕ್ಕೂ ಹೆಚ್ಚಿನ ಕ್ರಿಯಾತ್ಮಕ ಘಟಕಗಳಿವೆ. ಐಸಿಟಿ ಅಕಾಡೆಮಿಯೊಂದಿಗೆ ಒಡಂಬಡಿಕೆ ಸಹಾಯದಿಂದ ಸೈಬರ್ ಸೆಕ್ಯುರಿಟಿ ಸರ್ಟಿಫಿಕೇಟ್ ಕೋರ್ಸ್ ನೀಡಲಾಗುತ್ತಿದೆ ಎಂದರು.
ಸ್ವಾಯತ್ತ ಸ್ಥಾನಮಾನ ಪಡೆದ ಮಂಗಳೂರು ವಿವಿ ವ್ಯಾಪ್ತಿಯ ಕೆಲವೇ ಕಾಲೇಜುಗಳಲ್ಲಿ ಸಂತ ಫಿಲೋಮಿನಾ ಒಂದಾಗಿದೆ. ಕಾಲೇಜಿನಲ್ಲಿ ಈಗಾಗಲೇ ಅನೇಕ ಅನುದಾನಿತ ಕೋರ್ಸ್ಗಳವೆ. ಇವುಗಳಿಗೂ ಸ್ವಾಯತ್ತೆಗೂ ಸಂಬAಧವಿಲ್ಲö. ಅನುದಾನಿತ ಕೋರ್ಸ್ಗಳು ಯಥಾಪ್ರಕಾರ ಮುಂದುವರಿಯಲಿವೆ ಎಂದು ಪ್ರಾಂಶುಪಾಲರಾದ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಪ್ರಾಂಶುಪಾಲರಾದ ಡಾ.ವಿಜಯಕುಮಾರ್ ಮೊಳೆಯಾರ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.


