ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಗೆ ವರ್ಷದ ಸಂಭ್ರಮ

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಗೆ ವರ್ಷದ ಸಂಭ್ರಮ

ನಿಜವಾದ ದೇಶ ಪ್ರೇಮ ಭಾಷಣಕ್ಕೆ ಸೀಮಿತವಾಗಿರದೆ ನಿಜವಾಗಿ ಸಾಧಿಸಿ ತೋರಿಸಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಯದ್ದು , : ಕರ್ನಲ್. ಶರತ್ ಭಂಡಾರಿ

ಗ್ರಾಮೀಣ ಭಾಗದ ಯುವ ಜನತೆಗೆ ವಿ. ಅಕಾಡೆಮಿ ಬೆನ್ನೆಲುಬು: ಜಯರಾಮ ದೇರಪಜ್ಜನಮನೆ

ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ದಾರಿದೀಪವಾಗಿರುವ ವಿದ್ಯಾಮಾತಾ ಅಕಾಡೆಮಿಯು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಕಳೆದ ವರ್ಷದ ಅನಂತ ಚತುರ್ದಶಿ ದಿನದಂದು ಸುಳ್ಯದಲ್ಲಿ ತನ್ನ ಶಾಖೆಯನ್ನು ಪ್ರಾರಂಭಿಸಿ ಇದೀಗ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು ಈ ಸಲುವಾಗಿ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿಗಳಾದ ಕರ್ನಲ್ ಶರತ್ ರವರು ಮಾತನಾಡಿ “ಬದ್ಧತೆ ಎನ್ನುವ ಸೇವಾ ಮನೋಭಾವ, ಆದರ್ಶ ವಿಚಾರಧಾರೆಗಳು,ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಗಳು ಯುವ ಜನತೆಗೆ ದಾರಿದೀಪವಾಗಿದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ಯುವ ಪೀಳಿಗೆ ಇದನ್ನು ಅರಿತುಕೊಂಡು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಾಧನೆಯನ್ನು ಸ್ಮರಿಸಿ ಸಂಸ್ಥೆಯ ಮುಂದಿನ ಕಾರ್ಯಾಚಟುವಟಿಕೆಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ TAPCMS ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆಯವರು ಮಾತನಾಡಿ ವಿದ್ಯಾಮಾತಾ ಅಕಾಡೆಮಿ ಸುಳ್ಯದಲ್ಲಿ ಶಾಖೆ ಪ್ರಾರಂಭಿಸಿ ಸುಳ್ಯ ಪರಿಸರದ ಯುವ ಜನತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಅರಿವು ಮೂಡುತ್ತಿರುವುದು ಪ್ರಶಂಸನೀಯ ಎಂದು ಸಂಸ್ಥೆಯ ಏಳಿಗೆಗೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಲ್ ಶರತ್ ಭಂಡಾರಿ ಹಾಗೂ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕಧಿಕಾರಿ ಹಾಗೂ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಚಂದ್ರಾವತಿ ಬಡ್ಡಡ್ಕರವರನ್ನು ವಿದ್ಯಾಮಾತಾ ಅಕಾಡೆಮಿಗೆ ಅವರ ಸಹಕಾರವನ್ನು ಸ್ಮರಿಸಿ ವಿಶೇವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ನೆಲೆಯಲ್ಲಿ ಮಾತನಾಡಿದ ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಸಂಸ್ಥೆ ಹುಟ್ಟುಹಾಕಿದ ಹಿನ್ನೆಲೆ ಹಾಗೂ ಮುಂದಿನ ಯೋಜನೆಯ ಕುರಿತು ಬೆಳಕು ಚೆಲ್ಲಿದರು.
ಇದೇ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು, ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿಗಳಾದ ಚಂದ್ರಾವತಿ ಬಡ್ಡಡ್ಕರವರು ಧನ್ಯವಾದ ಕಾರ್ಯಕ್ರಮ ನಡೆಸಿಕೊಟ್ಟರು,
ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ಆಡಳಿತಾಧಿಕಾರಿ ಚಂದ್ರಕಾಂತ್, ತರಬೇತುದಾರರಾದ ಉಷಾ,ಯಶಸ್ವಿನಿರವರು ಹಾಗೂ ಪ್ರಸ್ತುತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಸಿಬ್ಬಂದಿ ಮಿಥುನ್ ರೈ ರವರು ಸಹಕರಿಸಿದರು. ಸಂಸ್ಥೆಗೆ ಒಂದು ವರ್ಷ ತುಂಬಿದ ಪ್ರಯುಕ್ತ ಬೆಳಗಿನ ಜಾವ ಗಣ ಹೋಮ ಹಾಗೂ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.

News Editor

Learn More →

Leave a Reply

Your email address will not be published. Required fields are marked *