
ವಿಟ್ಲ ಬಿಜೆಪಿ ಒಂದನೇ ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನವನ್ನು ಶಕ್ತಿ ಕೇಂದ್ರ ಪ್ರಮುಖ್ ಲಕ್ಷ್ಮಣ್ ವಿ ಮಾಡ ಇವರ ನೇತೃತ್ವದಲ್ಲಿ 2ನೇ ಬೂತ್ ನ ಹಿರಿಯ ಕಾರ್ಯಕರ್ತರಾದ ಚಂದಪ್ಪ ಗೌಡ ನೆಕ್ಕಿಲಾರ್ ಇವರ ಮನೆಯಲ್ಲಿ ಆರಂಭಿಸಲಾಯಿತು. ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ಸದಸ್ಯತ್ವ ಅಭಿಯಾನದ ಬಗ್ಗೆ ವಿವರಿಸಿದರು. ವಿಟ್ಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ವಿಟ್ಲ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು ಮಾತನಾಡಿದರು. ವೀರಪ್ಪ ಗೌಡ ರಾಯರಬೆಟ್ಟು ಸ್ವಾಗತಿಸಿದರು, ಪದ್ಮನಾಭ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಹರೀಶ್ ಮಾಡ, ರವಿ ಅಂಚನ್, ವಿಶ್ವನಾಥ್ ನಾಯ್ತೋಟ್ಟು, ಉದಯ್ ಕುಮಾರ್ ನಾಯ್ತೋಟ್ಟು, ನಿತಿನ್ ಬೊಡ್ಡೋಣಿ, ಪ್ರಶಾಂತ್ ಕಟ್ಟೆ, ಜಯರಾಮ ಅಡ್ಡಾಲಿ, ನವೀನ್ ಚಂದ್ರ, ಶಶಿಧರ ಕೈಂತಿಲ, ಉಮೇಶ್ ಇಂದ್ರಪಡ್ಪು, ನಿತಿನ್ ನೆಕ್ಕಿಲಾರ್ ಉಪಸ್ಥಿತರಿದ್ದರು.


