

ಶಾರ್ಟ್ ಸರ್ಕ್ಯೂಟ್ ನಿಂದ ಆ.31ರಂದು ರಾತ್ರಿ ಪುರುಷರಕಟ್ಟೆಯ ವಿಶ್ವಾಸ್ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿದ್ದು ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತಾ ಭೇಟಿ ನೀಡಿದರು.

ಪುರುಷರಕಟ್ಟೆಯಿಂದ ಶಾಂತಿಗೋಡು ತೆರಳುವ ರಸ್ತೆಯಲ್ಲಿರುವ ನವೀನ್ ಅವರ ವಿಶ್ವಾಸ್ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಭಸ್ಮವಾಗಿದೆ.

ಸುಮಾರು 8.30ರ ತನಕ ಅಂಗಡಿಯಲ್ಲಿದ್ದ ಮಾಲಕರು ಅಂಗಡಿ ಬಂದ್ ಮಾಡಿ ಮನೆಗೆ ತಲುಪಿದ ಕೆಲ ಹೊತ್ತಿನಲ್ಲಿಯೇ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.
ನರಿಮೊಗರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಬಲ್ಯಾಯ ಸಹಿತ ಹಲವು ಪ್ರಮುಖರು ಭೇಟಿ ನೀಡಿದರು.


