ಪುತ್ತೂರು: ಪ್ರತೀ ದಿನ ಸುಮಾರು ೭೦೦ರಿಂದ ೮೦೦ರಷ್ಟು ಮಂದಿ ಚಿಕಿತ್ಸೆಗಾಗಿ ಭೇಟಿ ನೀಡುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಪುತ್ತೂರು: ಪ್ರತೀ ದಿನ ಸುಮಾರು ೭೦೦ರಿಂದ ೮೦೦ರಷ್ಟು ಮಂದಿ ಚಿಕಿತ್ಸೆಗಾಗಿ ಭೇಟಿ ನೀಡುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಡಿಜಿಟಲ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಈ ವ್ಯವಸ್ಥೆ ಜಾರಿಯಾಗಿದ್ದುö, ಉಪ ವಿಭಾಗ ಮಟ್ಟದ ಮೊದಲ ಪ್ರಯೋಗ ಇಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ನಾಲ್ಕು ಕಡೆ ಡಿಜಿಟಲ್ ನೋಂದಣಿಯ ಫಲಕ ಅಳವಡಿಸಲಾಗಿದೆ. ಇದು ಸ್ಕಾ÷್ಯನ್ ಆ್ಯಂಡ್ ಶೇರ್ ಎಂಬ ಹೆಸರಿನ ವ್ಯವಸ್ಥೆಯಾಗಿದೆ. ಜನ ತಮ್ಮ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಇಲ್ಲಿ ಸ್ಕಾ÷್ಯನ್ ಮಾಡಿಕೊಂಡು ತಮ್ಮ ಸರತಿಯ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ತಮ್ಮ ಸರದಿ ಬರುವವರೆಗೆ ಆರಾಮವಾಗಿ ಕುಳಿತುಕೊಂಡು ಕಾಯಬಹುದಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೊತಿ ಪುತ್ತೂರಾಯ ತಿಳಿಸಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಸರಕಾರಿ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಕಾ÷್ಯನ್ ಆ್ಯಂಡ್ ಶೇರ್ ವ್ಯವಸ್ಥೆಯನ್ನು ಸ್ವತಃ ತಾವೇ ಮೊಬೈಲ್‌ನಲ್ಲಿ ಸ್ಕಾ÷್ಯನ್ ಮಾಡುವ ಮೂಲಕ ಪರೀಕ್ಷಿಸಿದರು.

ಇದೊಂದು ಉತ್ತಮ ಆಯ್ಕೆö. ಡಿಜಿಟಲ್ ಮಾಧ್ಯಮ ಬಳಸಿಕೊಂಡು ಜನರ ಸರತಿ ಸಾಲು ತಪ್ಪಿಸಲು ಸರಕಾರದ ಸೂಚನೆಯಂತೆ ಈ ವ್ಯವಸ್ಥೆ ಅಳವಡಿಸಲಾಗಿದೆ ಎಂದವರು ನುಡಿದರು.


ಅಭಾ ಕಾರ್ಡ್ ಐಡಿ ಪಡೆಯಬಹುದು
ಸ್ಕಾ÷್ಯನ್ ಮಾಡುವಾಗ ಮೊಬೈಲ್ ನಂಬರ್ ಬದಲು ಆಧಾರ್ ನಂಬರ್ ಮೂಲಕ ಲಾಗಿನ್ ಆದರಲ್ಲಿ ನಿರ್ದಿಷ್ಟ ಆ್ಯಪ್‌ಗೆ ಪ್ರವೇಶ ಪಡೆಯಲು ಸಾಧ್ಯ. ಇಲ್ಲಿ ಆಧಾರ್ ಸಹಕಾರದಿಂದ ನಮ್ಮ ಪೂರ್ತಿ ವಿಳಾಸ ಮತ್ತಿತರ ಮಾಹಿತಿ ಆಸ್ಪತ್ರೆಯ ಕಂಪ್ಯೂಟರ್‌ನಲ್ಲಿ ಕಾಣಿಸುತ್ತದೆ. ಅದನ್ನು ನೇರ ಪ್ರಿಂಟ್ ತೆಗೆಯುವ ಮೂಲಕ ಮಾಹಿತಿಗಳನ್ನು ಬರೆಯುತ್ತಾ ಸಮಯ ಕಳೆಯುವ ಅನಿವಾರ್ಯತೆ ತಪ್ಪಿಸಬಹುದು. ಆಧಾರ್ ಲಿಂಕ್ ಮೂಲಕ ಅಭಾ ಕಾರ್ಡ್ (ಆಯುಷ್ಮಾನ್ ಭಾರತ್ ಹೆಲ್ತ್ ಎಕೌಂಟ್) ಐಡಿ ನಂಬರ್ ಪಡೆದುಕೊಳ್ಳಬಹುದು. ಈ ಚಾರ್ಟ್ನಲ್ಲಿ ರೋಗಿಗೆ ನೀಡಲಾದ ಔಷಧಿಯ ವಿವರಗಳನ್ನು ದಾಖಲಿಸಿದರೆ ಮುಂದೆ ದೇಶದ ಯಾವುದೇ ಮೂಲೆಯಲ್ಲಿ ಐಡಿ ಮೂಲಕ ವೈದ್ಯಕೀಯ ಚಿಕಿತ್ಸೆಯ ಕೇಸ್ ಹಿಸ್ಟರಿ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಡಾ.ಆಶಾ ಪುತ್ತೂರಾಯ ಹೇಳಿದರು.

News Editor

Learn More →

Leave a Reply

Your email address will not be published. Required fields are marked *