
ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವರ್ಗಾವಣೆಯಾದರೂ ಆದೇಶವನ್ನು ತಡೆಹಿಡಿದು ಮತ್ತೆ ಮಂಗಳೂರಿಗೆ ಬಂದ ಆಯುಕ್ತ ಸಿ.ಎಲ್ ಆನಂದ್ ರವರ ಬೆಂಗಳೂರು ನಿವಾಸಕ್ಕೆ ಲೋಕಾಯುಕ್ತ ಧಾಳಿ ಮಾಡಿ ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ ಕಛೇರಿಗೆ ಯಾರು ಬಂದರೂ ಮಾಹಿತಿ ಪಡೆಯುತ್ತಿದ್ದ ಸಿ.ಎಲ್ ಆನಂದ ರವರು ಕೆಲದರ್ಜೆಯ ಅಧಿಕಾರಿಗಳಿಗೆ ಅವ್ಯಾಚ ಶಬ್ದಗಳಿಂದ ಬೈಯುತ್ತಿರುವುದು ಎಲ್ಲರಿಗೆ ತಿಳಿದ ವಿಚಾರ,ಮಂಗಳೂರಿನ ಗುತ್ತಿಗೆದಾರರನ್ನು ಹಿಡಿತದಲ್ಲಿ ಇಟ್ಡಿದ್ದ ಆಯುಕ್ತರು.
ರಾಜ್ಯಾದ್ಯಂತ ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಹಲವು ಸ್ಥಳಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿಎಲ್ ಆನಂದ ಅವರ ಬೆಂಗಳೂರಿನ ನಿವಾಸವೂ ಸೇರಿದೆ.
ಮಂಡ್ಯ ಮೂಲದ ಆನಂದ್ 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಮಂಗಳೂರಿನಿಂದ ವರ್ಗಾವಣೆ ಮಾಡಲಾಗಿತ್ತಾದರೂ ನಂತರ ಸರ್ಕಾರ ವರ್ಗಾವಣೆ ಆದೇಶವನ್ನು ತಡೆಹಿಡಿದಿತ್ತು.


