
ಉಡುಪಿ : ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಆಪ್ತ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಬಂಧಿತ ಮಹಿಳೆ
ಗರುಡ ಗ್ಯಾಂಗ್ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಸಫಾರ ಯಾನೆ ಸಾಜಿದ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಸಫಾರ ಯಾನೆ ಸಾಜಿದ ರನ್ನು ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ.
ಚೂರಿ ಇರಿತಕ್ಕೆ ಗರುಡ ಗ್ಯಾಂಗ್ ಲಿಂಕ್:ಕೆಲವು ತಿಂಗಳ ಹಿಂದೆ ಕಾರಿನಲ್ಲಿ ಬಂದ ತಂಡವೊಂದು ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಎಂಬಾತನಿಗೆ ಕರ್ವೇಲು ಜಂಕ್ಷನ್‌ನಲ್ಲೇ ಬೆಳಗ್ಗೆ ಚೂರಿ ಇರಿದು ಪರಾರಿಯಾಗಿದ್ದ. ಇದು ಗರುಡ ಗ್ಯಾಂಗ್‌ನ ಕೃತ್ಯವಾಗಿದ್ದು, ಚೂರಿ ಇರಿದ ನಾವುಂದ ನಿವಾಸಿ ಇಸಾಕ್ ಎಂಬಾತ ಗರುಡ ಗ್ಯಾಂಗ್‌ನ ಸದಸ್ಯ ಎನ್ನಲಾಗಿದೆ. ಈತನ ಅಜ್ಜಿ ಮನೆ ಕರ್ವೇಲು ಆಗಿದ್ದು, ಈತ ಝಕಾರಿಯ ಸಂಬಂಧಿ ಎನ್ನಲಾಗಿದೆ


