ಪುತ್ತೂರು ಘಟಕದ ವತಿಯಿಂದ ಗೃಹರಕ್ಷಕ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ.

ಪುತ್ತೂರು ಘಟಕದ ವತಿಯಿಂದ ಗೃಹರಕ್ಷಕ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪಿ.ಜಗನ್ನಾಥ ಮತ್ತು ಲಘು ಮತ್ತು ಪ್ರವಾಹ ರಕ್ಷಣಾ ತರಬೇತಿಯಲ್ಲಿ ಚಿನ್ನದ ಪದಕ ಪಡೆದ ಎಸ್.ಕೇಶವ ರವರಿಗೆ ಸನ್ಮಾನ ಕಾರ್ಯಕ್ರಮ ನೇರವೇರಿಸಿದರು ಈ ಕಾರ್ಯಕ್ರಮದಲ್ಲಿ ಮುಳಿಯ ಸಂಸ್ಥೆಯ ಕೃಷ್ಣ ವೇಣಿ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದು ಸಿಬ್ಬಂದಿಗಳ ಬಗ್ಗೆ ನಿಷ್ಕಾಮ ಸೇವೆ ಮಾಡುವ ಸಿಬ್ಬಂದಿಗಳು ದೇವರಿಗೆ ಸಮಾನರು ಎಂದು ನುಡಿದರು ಹಾಗೂ ಇಲಾಖಾ ಮುಖ್ಯಸ್ಥರು ಡಾ ಮುರಳಿಮೋಹನ್ ಚೂಂತಾರು ರವರು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ನಿಷ್ಕಾಮ ಸೇವೆಗೆ ಸೇರುವಂತೆ ತಿಳಿಸಿದರು ಮತ್ತು ನಮ್ಮ ಸಿಬ್ಬಂದಿಗಳು ಇಲಾಖೆಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತಿಳಿಸಿದರು.ಮತ್ತು ನಮ್ಮ ಸಿಬ್ಬಂದಿಗಳಿಗೆ ಒಂದು ಸೂರು ಕಲ್ಪಿಸುವ ಬಗ್ಗೆ ತಿಳಿಸಿದರು . ಕೃಷ್ಣ ವೇಣಿ ಪ್ರಸಾದ್ ರವರು ಅಧ್ಯಕ್ಷತೆ ವಹಿಸಿದ್ದರು ಡಾ ಮುರಳಿಮೋಹನ್ ಚೂಂತಾರು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು ಘಟಕಾಧಿಕಾರಿ ಅಭಿಮನ್ಯು ರೈ ಮತ್ತು ಸಾರ್ಜೆಂಟ್ ಸುರ್ದಶನ್ ಜೈನ್ ಗೃಹರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು

News Editor

Learn More →

Leave a Reply

Your email address will not be published. Required fields are marked *