ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಯೋಗಾಭ್ಯಾಸ ಪೂರಕ – ನಿವೃತ್ತ ಅಧ್ಯಾಪಿಕೆ ಶ್ರೀಮತಿ ಅಮಿತಾ.


ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಯೋಗದ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನಿತಾ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪನ್ಮೂಲ ವ್ಯಕ್ತಿಯಾದ ನಿವೃತ್ತ ಅಧ್ಯಾಪಿಕೆಯಾದ ಶ್ರೀಮತಿ ಅಮಿತಾ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯೋಗ ಎಂಬುದು ಎಲ್ಲರಿಗೂ ಸುಲಭ ರೀತಿಯಲ್ಲಿ ಮಾಡಬಹುದಾದ ವ್ಯಾಯಾಯ ವಾಗಿದೆ. ಯೋಗದ ಮೂಲಕ ಮನುಷ್ಯನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುದೃಡಗೊಂಡು ಸದಾ ಲವ ಲವಿಕೆ ಹೊಂದಿರುವಂತೆ ಮಾಡುತ್ತದೆ ಎಂದು ತಿಳಿದರು. ಸೀನಿಯರ್ ಅಸಿಸ್ಟೆಂಟ್ ಶ್ರೀಮತಿ ವಿಜಯ ಲಕ್ಷ್ಮಿ ಹಾಗೂ ಅಧ್ಯಾಪಿಕೆಯಾದ ಚಂದ್ರಾವತಿ ಶುಭ ಹಾರೈಸಿದರು. ಶೀ ರಾಜೇಶ್ ಕೊಡ್ಲಮೊಗರು ಸ್ಟಾಗತಿಸಿದರು. ವಿಜಯ ಕುಮಾರ್ ಧನ್ಯವಾದ ಸಮರ್ಪಿಸಿದರು. ಸುಮಾರು 300 ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

News Editor

Learn More →

Leave a Reply

Your email address will not be published. Required fields are marked *