ಅಲಂಗಾರ್ ನಲ್ಲಿ ಮತದಾನ ಮಾಡುತ್ತಿರುವ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪ.

ಕಡಬ ತಾಲ್ಲೂಕು ಅಲಂಗಾರ್ ಮಾಡಿಯೋಟ್ಟು ನಿವಾಸಿ ಸದಾನಂದ ಕುಮಾರ್  ಎಂಬ ವ್ಯಕ್ತಿ ಭೂತ್ ನಂಬರ್ 59 ರಲ್ಲಿ ತಾನು ಮಾತದಾನ ಮಾಡುವ ಫೋಟೋ ತೆಗೆದು ಸಾಮಾಜಿಕ ಜಾಲತಾಣ ವಾದ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು

ಬಿಜೆಪಿ ಮಹಾಶಕ್ತಿಕೇಂದ್ರ ಕಾರ್ಯದರ್ಶಿ ಅಶೋಕ್ ಕುಮಾರ್ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವಾಟ್ಸ್ ಆಪ್ ಸಂದೇಶದ ಮೂಲಕ ಸರ್ ನಿನ್ನೆ ನಡೆದ ಮತದಾನದ ಫೋಟೋ ವನ್ನು ಫೇಸ್ ಬುಕ್ ನ ಸ್ಟೇಟಸ್ ನಲ್ಲಿ ಹಾಕಿರುವ ಈ ವ್ಯಕ್ತಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸ ಬೇಕಾಗಿ ವಿನಂತಿ ಎಂಬುದಾಗಿ ದೂರು ನೀಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *