ಪೊಲೀಸರೊಂದಿಗೆ ಅನುಚಿತ ವರ್ತನೆ, ಜೀವ ಬೆದರಿಕೆ: ದೂರು ದಾಖಲು.

ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಬಳಿಕ ಕರೆಮಾಡಿ ಜೀವಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಉಡುಪಿ ನಗರ ಠಾಣೆ ಹಾಗೂ ಕೋಟ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಮರಿಗೌಡ ರಾತ್ರಿ ಕರ್ತವ್ಯದಲ್ಲಿರುವಾಗ ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುವ ಓಮ್ಮಿ ಕಾರೊಂದರಲ್ಲಿ ಸುಮಾರು 4 ಜನರು ಸಿಟಿ ಬಸ್‌ ನಿಲ್ದಾಣದ ಬಳಿಯ ಮೆಡಿಕಲ್‌ ಶಾಪ್‌ವೊಂದರ ಎದುರು ರಸ್ತೆ ಬದಿಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಬಿಯರ್ ಬಾಟಲಿ ಹಾಗೂ ರಾಡ್‌ಗಳನ್ನು ಎಸೆದು ಹೋಗಿದ್ದಾರೆ.

ಅಲ್ಲದೆ, ಇದೇ ವಠಾರದಲ್ಲಿ 2-3 ಬಾರೀ ಸುತ್ತಾಡುತ್ತಿದ್ದ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ ಆ ವಾಹನ ಮಾಲೀಕನಲ್ಲಿ ವಿಚಾರಿಸಲಾಗಿತ್ತು. ಬಳಿಕ ಆರೋಪಿ ಆದಮ್ ಎಂಬಾತ ಮರಿಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅದೇ ಫೋನ್‌ನಲ್ಲಿ ಮತ್ತೂರ್ವ ಆರೋಪಿ ಕೂಡ ಬೆದರಿಕೆ ಹಾಕಿದ್ದಾನೆ. ಈ ಕುರಿತು ಮರಿಗೌಡ ಅವರು ಉಡುಪಿನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *