
ಚಾಮರಾಜನಗರ : ಕಾಂಗ್ರೆಸ್ ಪಕ್ಷದ ನಾಯಕರಿಗೆ ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದದ್ದು ತಿಂದ ಅನ್ನ ಅರಗಿಸಿಕೊಳ್ಳದಂತಾಗಿದೆ.ದಿನಕ್ಕೊಂದು ಹೇಳಿಕ್ಕೆ ಕೊಡುತ್ತ ಹಿಂದೂ ಸಮಾಜದ ತೇಜೋವದೆ ಮಾಡುತ್ತ ಬಂದಿದಂತೂ ನಿಜ.
ಕರ್ನಾಟಕದ ಪಶುಸಂಗೋಪನೆ ಮತ್ತು ರೇಷ್ಮೆ ಕೃಷಿ ಸಚಿವರಾದ ಕೆ.ವೆಂಕಟೇಶ್ ಅವರು ರಾಮಮಂದಿರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಮನೆಗೆ ಕೊಟ್ಟಿರುವ ಮಂತ್ರಾಕ್ಷತೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ಬಂದಿರುವುದಲ್ಲ. ಈ ನನ್ಮಕ್ಕಳು ಬಿಜೆಪಿಗರು ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ ಹಂಚಿದ್ದಾರೆ ಎಂದು ಸಚಿವ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾವನಾತ್ಮಕ ವಿಚಾರ ಇಟ್ಟುಕೊಂಡೇ ಬಿಜೆಪಿ ರಾಜಕೀಯ ಮಾಡುತ್ತಿದೆ. 400 ಸ್ಥಾನ ಗೆಲ್ಲುವ ಹಿಂದಿನ ಅಜೆಂಡಾವೇ ಸಂವಿಧಾನ ಬದಲಾವಣೆ ಎಂದು ಹೇಳಿದ್ದು ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದ್ದು ಅಂತಾ ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು ಈಗ 400 ಸೀಟು ಗೆದ್ದರೆ ಮುಂದೆ ಚುನಾವಣೆನೇ ಬೇಡ. ಜನ ನಮಗೆ ಓಟ್ ಹಾಕುತ್ತಾರೆ ಅಂತ ಹೇಳುತ್ತಾರೆ. ಯಾಕೆ ಅಯೋಧ್ಯೆಯಲ್ಲಿ ಮಾತ್ರ ರಾಮ ಮಂದಿರ ಇರೋದಾ? ಮಾತೆತ್ತಿದರೆ ರಾಮ ಮಂದಿರ ಅಂತಾ ಹೇಳುತ್ತಾರೆ. ರಾಮ ಇವರ ಅಪ್ಪನ ಸ್ವತ್ತ ಎಲ್ಲಾ ಊರಿನಲ್ಲೂ ರಾಮಮಂದಿರ ಇದೆ, ನಮ್ಮ ಊರಿನಲ್ಲೂ ಇದೆ ಎಂದಿದ್ದಾರೆ.


