
ಪುತ್ತೂರು
ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ಪ್ರಕರಣ
8 ಕಾಂಗ್ರೆಸ್ ಬೆಂಬಲಿಗರು ಅಂದರ್
8 ಆರೋಪಿಗಳನ್ನ ಬಂಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು
ಕಡಬ ತಾಲೂಕಿನ ಪಾತಾಜೆ ನಿವಾಸಿ ರೌಡಿಶೀಟರ್ ಪ್ರಜ್ವಲ್ ರೈ(34), ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್ ಶೆಟ್ಟಿ(31), ಪುತ್ತೂರಿನ ಆರ್ಯಾಪು ನಿವಾಸಿ ಸನತ್ ರೈ(31), ಬಲ್ನಾಡು ನಿವಾಸಿ ರೋಹಿತ್ ನಾಯ್ಕ್(26), ಸಾಮೆತಡ್ಕ ನಿವಾಸಿ ಅಖಿಲ್(28), ಆರ್ಯಾಪು ನಿವಾಸಿ ಕೀರ್ತನ್ ರೈ(26), ಬನ್ನೂರು ನಿವಾಸಿ ಸರ್ವೇಶ್ ರಾಜ್ ಅರಸ್(24), ವಿಟ್ಲ ಕಂಬಳಬೆಟ್ಟು ನಿವಾಸಿ ಸುಮಿತ್ ಶೆಟ್ಟಿ(29) ಬಂಧಿತರು
ನಿನ್ನೆ ತಾರಿಗುಡ್ಡೆಯಲ್ಲಿರುವ ಜಯಾನಂದ್ ಕೆ. ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದ ಆರೋಪಿಗಳು
ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ಯುವಕರು ಬಿಜೆಪಿಯ ಜಯಾನಂದ್ ಕೆ ಅವರಿಗೆ ಅವ್ಯಾಚ್ಯವಾಗಿ ನಿಂದಿಸಿ, ಜೀವಬೆದರಿಕೆಯೊಡ್ಡಿದ್ದರು
ಅನುದಾನ ಹಂಚಿಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಹಾಕಿದ್ದ ಬಿಜೆಪಿಗರು
ಶಾಸಕ ಅಶೋಕ್ ರೈ ಸಾವಿರ ಕೋಟಿ ರೂ ಅನುದಾನ ತಂದಿದ್ದಲ್ಲಿ ಬಹಿರಂಗ ಪಡಿಸಲಿ ಎಂದು ಪ್ರಶ್ನೆ ಹಾಕಿದ್ದ ಬಿಜೆಪಿಗರು
ಈ ವಿಚಾರದಲ್ಲೇ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸದಸ್ಯ ಜಯಾನಂದ್ ಕೆ ಅವರಿಗೆ ಬೆದರಿಕೆ
ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದ ಎಂಟು ಜನರನ್ನ ಬಂಧಿಸಿದ ಪೊಲೀಸರು
ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಸತೀಶ್ ಜಿ.ಜೆ. ಹಾಗೂ ಎಸ್ಸೈ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ


