

ಕಳೆದೊಂದು ವರ್ಷದಿಂದ ಕಗ್ಗಂಟಾಗಿ ಉಳಿದಿದ್ದ ಅರುಣ್ ಪುತ್ತಿಲ ಮತ್ತು ಬಿಜೆಪಿ ಸೇರ್ಪಡೆ ವಿಚಾರ ಕೊನೆಗೂ ಮಾ 14 ರಂದು ಇಳಿ ಸಂಜೆ ಮುಕ್ತಾಯಗೊಂಡಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ವಿಜಯೇಂದ್ರ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ಅರುಣ್ ಪುತ್ತಿಲ ಬೇಷರತ್ತಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು . ಆ ಬಳಿಕ ಅರುಣ್ ಪುತ್ತಿಲ ಹಾಗೂ ಸುನಿಲ್ ಕುಮಾರ್ ಜಂಟಿ ಪತ್ರಿಕಾಗೋಷ್ಟಿ ನಡೆಸಿದರು.

ಈ ಸಂದರ್ಭಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ್ ರಾವ್, ಪುತ್ತಿಲ ಪರಿವಾರದ ಮುಖಂಡರಾದ ಪ್ರಸನ್ನ ಮಾರ್ತಾ , ಉಮೇಶ್ ಕೋಡಿಬೈಲು ಮತ್ತಿತ್ತರರು ಉಪಸ್ಥಿತರಿದ್ದರು.


ಪುತ್ತಿಲ ಪರಿವಾರವನ್ನು ಬಿಜೆಪಿ ಜತೆ ವಿಲೀನಗೊಳಿಸಲಾಗಿದೆಯೇ ? ಅರುಣ್ ಪುತ್ತಿಲರಿಗೆ ಮುಂಬರುವ ದಿನಗಲಲ್ಲಿ ಯಾವ ಹುದ್ದೆ ಸಿಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ . ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷದ ಅಭ್ಯರ್ಥಿಯ ಆಯ್ಕೆಯಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡಿಲ್ಲ ಎಂದು ಅರುಣ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಳಿಕ ಕೂಡ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮಧ್ಯೆ ಹಗ್ಗ ಜಗ್ಗಾಟ ಮುಂದುವರಿದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪುತ್ತೂರಿನಲ್ಲಿ ಅವರಿಬ್ಬರು ಪರಸ್ಪರ ಸ್ಪರ್ಧಿಸಿದ್ದರು.


