ಕಾಸರಗೋಡು: ರಸ್ತೆ ಅಪಘಾತಕ್ಕೆ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಬಲಿ

ಕಾಸರಗೋಡು: ಟಿಪ್ಪರ್ ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿರುವ ಅಪಘಾತಕ್ಕೆ ಬೈಕ್ ಸವಾರ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಬಲಿಯಾಗಿರುವ ಘಟನೆ ಬಂದ್ಯೋಡು ಸಮೀಪದ ಮುಟ್ಟಂ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಪ್ಪಳ ನಯಾಬಜಾ‌ರ್ ನಾಟೇಕಲ್ ನಿವಾಸಿ ಮುಹಮ್ಮದ್ ಮಿಸ್ಸಾಹ್ (21) ಮೃತಪಟ್ಟ ಯುವಕ. ಸಹಸವಾರ ಮಿಸ್ಲಾಬ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾನೆ.
ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಸ್ಸಾಹ್ ಬೈಕಿನಲ್ಲಿ ಕಾಸರಗೋಡಿಗೆ ತೆರಳಿ ಮಿಸ್ಲಾಬ್ ನೊಂದಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇವರಿಬ್ಬರೂ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *