
ಇಂದು ಬೆಳಗ್ಗೆ ಕಡಬದಲ್ಲಿ ಅಬೀನ್ ಎಂಬಾತ ಆಸಿಡ್ ದಾಳಿ ನಡೆಸಿದ ಪಿಯುಸಿ ವಿದ್ಯಾರ್ಥಿನಿಯರಾದ ಅಲೀನಾ, ಅರ್ಚನ, ಅಮೃತ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಕುಟುಂಬಸ್ಥರ ಜೊತೆ ಮಾತನಾಡಿದರು.
ಆದಷ್ಟು ಶೀಘ್ರವಾಗಿ ಗುಣಮುಖವಾಗಿ ಬರಲೆಂದು ಹಾರೈಸಿದರು.
ಮಂಗಳೂರಿನ ಹಿಂದೂ ಸಂಘಟನೆಯ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.


