
ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಪಬ್ಗಳ ಹಾವಳಿ ಹೆಚ್ಚಾಗುತ್ತಿದೆ. ಕೇವಲ ಬಾರ್ ನಡೆಸಲು ಅನುಮತಿ ಪಡೆದು ಡಿಜೆ ಪಾರ್ಟಿಗಳನ್ನ ನಡೆಸುತ್ತಿವೆ. ಈಗಿನ ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಚರಿಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆ ಯಾಗಿದೆ. ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿರುವ ಪಬ್ ಗಳು ತಮಗೆ ಬೇಕಾದಂತೆ ಯಾವುದೇ ರೂಲ್ಸ್ ಗೆ ಕಿವಿ ಕೊಡದೆ ಪ್ರತಿನಿತ್ಯ ತಡ ರಾತ್ರಿಯವರಿಗೂ ಕಾರ್ಯಾಚರಿಸುತ್ತಿದೆ. ಡಿಜೆ ಮ್ಯೂಸಿಕ್ ಪ್ಲೇ ಕುಡಿತದಲ್ಲಿ ಯುವಕ ಯುವತಿಯರು ಭಾಗಿಯಾಗಿ ನಶೆಯಲ್ಲಿ ತೇಲಾಡುತ್ತಿದ್ದಾರೆ. ಮಂಗಳೂರಿನ ಇಂತಹ ಪರಿಸ್ಥಿತಿಯನ್ನು ನೋಡಿದರೆ ನಶೆ ಲೋಕವೇ ತೆರೆದುಕೊಂಡಂತೆ ಭಾಸವಾಗುತ್ತಿದೆ. ಪಬ್ ಗಳಿಗೆ ಬಾರ್ ನಡೆಸಲು ಮಾತ್ರ ಅನುಮತಿ ಇದ್ದರೂ ಬಂದ ಗ್ರಾಹಕರಿಗೆ ಬೇಕಾದನ್ನು ನೀಡಿ ಕುಡಿಸಿ ಕಳುಹಿಸಿಕೊಡುವುದು ಅಷ್ಟೇ ಆದರೆ ಇಲ್ಲಿ ನಡೆಯುವುದೇ ಬೇರೆ ಇದೆಲ್ಲ ಗೊತ್ತಿದ್ದರೂ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದು ಯಾವುದನ್ನು ಪ್ರಶ್ನೆ ಮಾಡುತ್ತಿಲ್ಲ ಇದು ನಮ್ಮ ನಗರದ ಅವ್ಯವಸ್ಥೆಯು ವ್ಯವಸ್ಥೆಯು ಗೊತ್ತಾಗುತ್ತಿಲ್ಲ. ಪಬ್ ಗಳಲ್ಲಿ ಯುವತಿಯರನ್ನು ತಪಾಸಣೆ ಮಾಡಿ ಒಳಗೆ ಕಳುಹಿಸುತ್ತಾರೆ ಆದರೆ ಒಳಗಡೆ ಮಾತ್ರ ಎಲ್ಲಾ ರೀತಿಯ ಅಮಲು ಪದಾರ್ಥಗಳು ಯುವಕ ಯುವತಿಯರ ಕೈ ಸೇರುತಿದೆ. ಇವರು ತಪಾಸಣೆ ಮಾಡುವುದು ಕೇವಲ ಜೋಡಿಗಳ ಜೊತೆ ಬಂದಿದ್ದಾರೆಯೋ, ಒಳ್ಳೆಯ ಬಟ್ಟೆ ಶೂ ಧರಿಸಿದ್ದಾರೆಯೋ ಎಂದು ಮಾತ್ರ. ಶರ್ಲಾಕ್, ಓಯನ್ಯಾಕ್ಸ್ ಇಂತಹ ಹಲವು ಪಬ್ ಗಳು ಅನುಮತಿ ರಹಿತವಾಗಿ ತಡ ರಾತ್ರಿಯವರೆಗೂ ಕಾರ್ಯಾಚರಿಸುತ್ತೆ. ಇವುಗಳ ಹಾವಳಿಗೆ ಯುವಕ ಯುವತಿಯರು ನಶೆಗೆ ದಾಸರಾಗುತ್ತಿದ್ದಾರೆ ಆದರೆ ಅಧಿಕಾರಿಗಳು ಮಾತ್ರ ಇದ್ಯಾವುದನ್ನು ಪ್ರಶ್ನಿಸದೆ ಇರುವುದು ವಿಪರ್ಯಾಸ. ಒಟ್ಟಾರೆಯಾಗಿ ಯಾರ ಭಯವೂ ಇಲ್ಲದೆ ಪಬ್ ಗಳ ಹಾವಳಿಯಿಂದ ಮಂಗಳೂರಿಗೆ ಕೆಟ್ಟ ಹೆಸರಂತೂ ಬಂದು ಬಿಟ್ಟಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯು ಯಾವ ಮಟ್ಟಕ್ಕೆ ತಲುಪುತ್ತದೋ ಗೊತ್ತಿಲ್ಲ ಅದಕ್ಕಿಂತ ಮೊದಲೇ ಸಂಬಂಧಪಟ್ಟವರು ಎಚ್ಚೆತ್ತು ಕಠಿಣ ಕ್ರಮಗಳ ಜೊತೆಗೆ ಅಕ್ರಮಕ್ಕೆ ನಾಂದಿ ಹಾಡಬೇಕಾಗಿದೆ.


