
ಫಾರ್ಮ್ ಫ್ರೆಂಡ್ಸ್ ಮಂಗಳೂರು ವತಿಯಿಂದ 17ನೇ ವರ್ಷದ ಫಾರ್ಮೋತ್ಸವ 2024 ಮಂಗಳೂರಿನ ಪದವು ಕ್ರೀಡಾಂಗಣದಲ್ಲಿ ಜರುಗಿತು.
ಫೆಬ್ರವರಿ 25ರಂದು ನಡೆದ ಕ್ರೀಡೋತ್ಸವದಲ್ಲಿ ಪುರುಷರಿಗೆ ಕ್ರಿಕೆಟ್ ಮಹಿಳೆಯರಿಗೆ ತ್ರೋಬಾಲ್ ಹಾಗೂ ತುಳುನಾಡಿನ ಸಾಂಪ್ರದಾಯಿಕ ಮನೋಲ್ಲಸ ವನ್ನು ನೀಡುವ ಹತ್ತು ಹಲವು ಮನೋರಂಜನಾತ್ಮಕ ಕ್ರೀಡೆಗಳು ನಡೆದವು.

















ಸಂಜೆ ಮೈದಾನದ ಸಮೀಪದ ಪದವು ಹೈಸ್ಕೂಲ್ ಆಡಿಟೋರಿಯಂ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ನೃತ್ಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಜಿಕೆ ಫರ್ಮಾ ಮಾಲಿಕ ಗಣೇಶ್ ಕಾಮತ್, ಜಿಕೆಸಿ ಅಸೋಸಿಯೇಟ್ಸ್ ಶ್ರೀಧರ್ ಕಾಮತ್, ಫಾರ್ಮ್ ಪ್ರಮೋಟರ್ಸ್ ಒಸ್ಟಿನ್ ಡಿಸೋಜ, ನಾಯಕ್ ಡಿಸ್ಟ್ರಿಬ್ಯೂಟರ್ ವಿಜಯ್ ನಾಯಕ್, ಶಕ್ತಿ ಲೈಫ್ ಲೈನ್ ಶ್ರೀನಿವಾಸ್ ಭಟ್, ಎಸ್ ಕೆ ಡಿ ಸಿ ಅಂಡ್ ಡಿಎ ಪ್ರಧಾನ ಕಾರ್ಯದರ್ಶಿ ಎ.ಕೆ ಜಮಾಲ್, ಫಾರ್ಮ್ ಫ್ರೆಂಡ್ಸ್ ಸ್ಥಾಪಕ ಅಧ್ಯಕ್ಷ ಅಜಂತ ಪಿಲಾರ್, ಗೌರವಾಧ್ಯಕ್ಷ ವಿಜಯ್ ಬೋಳಾರ್, ಅಧ್ಯಕ್ಷ ಹರೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಭಾಗವಹಿಸಿದ್ದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ದ.ಕ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶ್ರೀ ಬಾಬು, ಎಸ್ ಕೆ ಡಿ ಸಿ ಅಂಡ್ ಡಿ ಎ ಅಧ್ಯಕ್ಷ ಅರುಣ್ ಶೆಟ್ಟಿ, ಉಪಾಧ್ಯಕ್ಷ ಅಮೃತ್ ಕಿರಣ್ ರೈ, ಮೆಜೆಲ್ಲಾ ಫಾರ್ಮ್ ನೀತಾ ಫರ್ನಾಂಡಿಸ್, ಕೋಶಾಧಿಕಾರಿ ರಾಜೇಶ್ ವಾಮಂಜೂರ್, ಶ್ರೀ ಬಾಬು ಬಿ. ಎನ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.











