ವಿವಿಧ ಭಜನಾ ಸಂಘಗಳಿಂದ ಸಂಧ್ಯಾ ಭಜನೆ ಕಾರ್ಯಕ್ರಮವು ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದಪಡ್ಪು ವರ್ಕಾಡಿಯಲ್ಲಿ ನಡೆಯಿತು.

ವಿವಿಧ ಭಜನಾ ಸಂಘಗಳಿಂದ ಸಂಧ್ಯಾ ಭಜನೆ ಕಾರ್ಯಕ್ರಮವು ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದಪಡ್ಪು ವರ್ಕಾಡಿಯಲ್ಲಿ ನಡೆಯಿತು.
ಕಾರ್ಯಕ್ರಮವು ಫೆಬ್ರವರಿ 1ರಂದು ಆರಂಭಗೊಂಡಿದ್ದು ಮಾರ್ಚ್ 19 ರಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಜನಾ ಸಂಘಗಳಿಂದ ರಾತ್ರಿ ಗಂಟೆ 7 ರಿಂದ 8:30ರವರೆಗೆ 48 ದಿನಗಳ ಪರ್ಯಂತ ಸಂಧ್ಯಾ ಭಜನೆ ನಡೆಯಲಿದೆ. ಇಂದು ವೈದ್ಯನಾಥ ಸೇವಾ ಸಮಿತಿಯಿಂದ ಹೂವಾಕುವ ಕಲ್ಲು ಭಜನಾ ಸೇವೆ ನಡೆಯಿತು. ಕಾರ್ಯಕ್ರಮವನ್ನು , ತಲಪಾಡಿ ಗ್ರಾಮ ಪಂಚಾಯತ್ನ ಮಾಜಿ ಸದಸ್ಯ ಯಶು ಪಕ್ಕಳ,ತಲಪಾಡಿ, ಚಂದ್ರಿಕಾ ಪಕ್ಕಳ ದಂಪತಿಗಳು, ಕೊರಗಪ್ಪ ಪೂಜಾರಿ ಯಾನೆ ಅರಸ ಪೂಜಾರಿ ಕುದ್ಕೋರಿ ದಂಪತಿಗಳು, ಕರುಣಾಕರ, ಸುಜಾತಾ ದಂಪತಿಗಳು ಬಾಲಕೃಷ್ಣ ಬಜಂಗ್ರೆ ದೀಪ ಪ್ರಜ್ವಲನೆ ಗೈದರು. ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಪ್ರೇಮಾನಂದ ರೈ ನೆಟ್ಟಿಲ ಕೋಡಿ, ಉಪಾಧ್ಯಕ್ಷ ಗಂಗಾಧರ ಶೆಟ್ಟಿ, ಖಜಾಂಚಿ, ಸತೀಶ್ ಶೆಟ್ಟಿ ನೆತ್ತಿಲ, ಗೌರವ ಸಲಹೆಗಾರ, ಮೋಹನದಾಸ ಭಂಡಾರಿ ನೆತ್ತಿಲ ಬಾಳಿಕೆ ಕಾರ್ಯದರ್ಶಿ ಮೋಹನದಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಯತಿರಾಜ್ ಶೇಟ್ಟಿ ಕೆದುಂಬಾಡಿ ಪ್ರಧಾನ ಅರ್ಚಕರು ರಾಘವೇಂದ್ರ ಆಚಾರ್ಯ, ಹರೀಶ್ ಶೆಟ್ಟಿ ಸಾಂತ್ಯಮೇಗಿನ ಮನೆ ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.

News Editor

Learn More →

Leave a Reply

Your email address will not be published. Required fields are marked *