
ಬಜೆಟ್ ಮಂಡನೆಯಲ್ಲಿ ಕರ್ನಾಟಕದ ಘನ ಸರಕಾರ ಬಂಟರನ್ನು ನಿರ್ಲಕ್ಷ ಮಾಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸರಕಾರ ಕೂಡಲೇ ಎಚ್ಚೆತ್ತುಕೊಂಡು 500 ಕೋಟಿ ಅನುದಾನದೊಂದಿಗೆ ಈಗಾಗಲೇ ಘೋಷಣೆ ಮಾಡಿದಂತೆ, ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಹಾಕ್ಕೋತ್ತಾಯ ಮಾಡುತ್ತಿದ್ದೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಬಂಟರ ಒಕ್ಕೂಟಕ್ಕೆ ಪಕ್ಷವಿಲ್ಲ ಪಕ್ಷಭೇದವಿಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನಾವು ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಕರೆದಿದ್ದೆವು. ಇದಕ್ಕಿಂತ ಮುಂಚೆ ಬೊಮ್ಮಾಯಿಯವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದೆವು. ಎಲ್ಲರೂ ನಮ್ಮವರೇ ಯಾರು ನಮಗೆ ಸಹಕರಿಸುತ್ತಾರೋ ಅವರು ನಮ್ಮವರು. ಈ ನಿಟ್ಟಿನಲ್ಲಿ ಪಕ್ಷಭೇದ ಮರೆತು ಎಲ್ಲಾ ಶಾಸಕರು ಸಹಕಾರ ನೀಡಬೇಕು ಮತ್ತು ಸಮುದಾಯದ ಕೆಳಸ್ತರದ ವ್ಯಕ್ತಿಗಳ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಮಹಾನಿರ್ದೇಶಕರಾದ , ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ ಶೆಟ್ಟಿ , ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.






