ನಂಜನಗೂಡು : ನೀರು ಕೇಳಿ ಗೃಹಿಣಿಯ ಕತ್ತಿನಲ್ಲಿದ್ದ ಸರ ಕಳ್ಳತನಗೈದು ಪರಾರಿಯಾದ ಖದೀಮ.

ಮನೆಯಲ್ಲಿ ನೀರು ಕುಡಿಯುವ ನೆಪದಲ್ಲಿ ಗೃಹಿಣಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳ ಕದ್ದೊಯ್ದಿರುವ ಘಟನೆ ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪದ್ಮಾವತಿ ಎಂಬ ಗೃಹಿಣಿಯ ಮನೆಗೆ ತೆರಳಿದ ಕಳ್ಳನೂ, ನೀರು ಕುಡಿಯಬೇಕು ಎಂದು ಗೃಹಿಣಿಯನ್ನು ಕೇಳಿದ್ದಾನೆ. ಪದ್ಮಾವತಿ ನೀರನ್ನು ತೆಗೆದುಕೊಂಡು ಬಂದು ಕೊಡುವ ವೇಳೆ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳ ಕದ್ದೊಯ್ದಿದ್ದಾನೆ.

ಸುಮಾರು ಎರಡುವರೆ ಲಕ್ಷ ಬೆಳೆಬಾಳುವ ಚಿನ್ನದ ಸರವಾಗಿದ್ದು, ಕಳ್ಳನನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳನಿಗೆ ಬಲೆ ಬೀಸಿದ್ದಾರೆ. ಡಿವೈಎಸ್ಪಿ ರಘು, ಪಿಎಸ್ಐ ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *