ಗೋಕರ್ಣ : ಗಾಂಜಾ ನಶೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಮಹಿಳಾ ಟೆಕ್ಕಿಗಳು.

ಗೋಕರ್ಣ ::

ಗಾಂಜಾ ಸೇವನೆ ಮಾಡಿ ಅಡ್ಡಾದಿಡ್ಡಿ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಮಹಿಳಾ ಟೆಕ್ಕಿಗಳು, ತಮ್ಮನ್ನು ಪ್ರಶ್ನಿಸಿದ ಮೂವರು ಮಹಿಳಾ ಪೊಲೀಸರ ಮೇಲೆ ಶನಿವಾರ ರಾತ್ರಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ

ಬಿಹಾರ ಮೂಲದ ಪಲ್ಲವಿ ಪ್ರಿಯಾ ಸುನಿಲಕುಮಾರ್ ( 29) ಮತ್ತು ಜಾರ್ಖಂಡ್‌ನ ಪ್ರಿಯಾರಾಯ್ ಧರ್ಮೇಂದ್ರಕುಮಾರ್ (26) ಹಲ್ಲೆ ನಡೆಸಿದ ಪ್ರವಾಸಿಗರು. ಇಬ್ಬರೂ ಬೆಂಗಳೂರಿನಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಗೆಳೆಯರೊಂದಿಗೆ ಗೋಕರ್ಣಕ್ಕೆ ಬಂದಿದ್ದರು.

ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಪಾದಚಾರಿಗಳಿಗೆ ಭಯಪಡಿಸುತ್ತಿದ್ದನ್ನು ಕಂಡು ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಟೆಕ್ಕಿಗಳು ಮೊದಲು ಆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಹಾಯಕ್ಕೆ ಬಂದ ಮತ್ತಿಬ್ಬರು ಮಹಿಳಾ ಪೊಲೀಸರ ಮೇಲೂ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರೂ ಟೆಕ್ಕಿಗಳನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಗಾಂಜಾ ಸೇವಿಸಿದ್ದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

News Editor

Learn More →

Leave a Reply

Your email address will not be published. Required fields are marked *