ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಕಂಡಿದೆ. ಇಂಗ್ಲೆಂಡ್‌ ತಂಡವನ್ನು 2ನೇ ಇನ್ನಿಂಗ್ಸ್‌ನಲ್ಲಿ 122 ರನ್‌ಗಳಿಗೆ ಕಟ್ಟಿಹಾಕಿದ ಭಾರತ ತಂಡ 434 ರನ್‌ಗಳ ಗೆಲುವು ಕಂಡಿದೆ.

ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಕಂಡಿದೆ. ಇಂಗ್ಲೆಂಡ್‌ ತಂಡವನ್ನು 2ನೇ ಇನ್ನಿಂಗ್ಸ್‌ನಲ್ಲಿ 122 ರನ್‌ಗಳಿಗೆ ಕಟ್ಟಿಹಾಕಿದ ಭಾರತ ತಂಡ 434 ರನ್‌ಗಳ ಗೆಲುವು ಕಂಡಿದೆ.

ರಾಜ್‌ಕೋಟ್‌ (ಫೆ.18): ಪ್ರವಾಸಿ ಇಂಗ್ಲೆಂಡ್‌ ತಂಡವನ್ನು ಮೂರನೇ ಟೆಸ್ಟ್‌ ಪಂದ್ಯದಲ್ಲಿ 434 ರನ್‌ಗಳಿಂದ ಮಣಿಸಿದ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆಗೇರಿದೆ. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ ಅಂತರದಲ್ಲಿ ಭಾರತ ತಂಡದ 577 ಟೆಸ್ಟ್‌ಗಳಲ್ಲಿ ಅತ್ಯಂತ ದೊಡ್ಡ ಗೆಲುವು ಎನಿಸಿದೆ.2021ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 372 ರನ್‌ಗಳಿಂದ ಗೆಲುವು ಕಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು ಇಂಗ್ಲೆಂಡ್ ತಂಡದ ಪಾಲಿಗೂ 2ನೇ ಅತಿದೊಡ್ಡ ಅಂತರದ ಸೋಲಾಗಿದೆ. 1934ರಲ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 562 ರನ್‌ಗಳಿಂದ ಸೋಲು ಕಂಡಿದ್ದು ಇಂಗ್ಲೆಂಡ್‌ನ ಈವರೆಗಿನ ಅತಿದೊಡ್ಡ ಅಂತರದ ಸೋಲು ಎನಿಸಿದೆ. ಟೆಸ್ಟ್‌ ತಂಡದ ನಾಯಕನಾಗಿ ಬೆನ್‌ ಸ್ಟೋಕ್ಸ್‌ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿರುವುದು ಇದು 2ನೇ ಬಾರಿ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ 2 ಪಂದ್ಯಗಳಲ್ಲಿ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್‌ ಸೋಲು ಕಂಡಿತ್ತು.

News Editor

Learn More →

Leave a Reply

Your email address will not be published. Required fields are marked *