
- ಸ್ಮೈಲಿ ಕ್ರಿಯೇಶನ್ಸ್ ಬೆಂಗಳೂರು ಇವರ ಚೊಚ್ಚಲ ಪ್ರಯತ್ನವಾದ ಕ್ರಶ್ ಕನ್ನಡ ಚಿತ್ರದ ಹಾಡುಗಳ ಬಿಡುಗಡೆಯ ಕಾರ್ಯಕ್ರಮ ಮಂಗಳೂರಿನ ರಾವ್ &ರಾವ್ ಸರ್ಕಲ್ ನಲ್ಲಿರುವ ರಿಕ್ಷಾ ನಿಲ್ದಾಣದಲ್ಲಿ ಅದ್ದೂರಿಯಿಂದ ಜನವರಿ 28ರಂದು ನಡೆಯಿತು. ಶೇಕಡ 75ರಷ್ಟು ಚಿತ್ರಿಕರಣವನ್ನು ಮಂಗಳೂರಿನಲ್ಲಿ ಮಾಡಿದ ಚಿತ್ರತಂಡ ಇದೀಗ ಹಾಡಿನ ಬಿಡುಗಡೆಯನ್ನು ಮಂಗಳೂರಿನಲ್ಲಿ ಮಾಡಿ ಮಂಗಳೂರು ಪ್ರೇಮವನ್ನು ಮೆರೆದಿದ್ದಾರೆ. ಫೆಬ್ರವರಿ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಕ್ರಶ್ ಚಿತ್ರವನ್ನು ಗೆಲ್ಲಿಸಬೇಕೆಂದು ಸಮಸ್ತ ಚಿತ್ರತಂಡ ಮಂಗಳೂರಿನ ಜನತೆಯನ್ನು ವಿನಂತಿಸಿದ್ದಾರೆ.

- ಸಮಾರಂಭದಲ್ಲಿ ನಿರ್ಮಾಪಕರಾದ ಚಂದ್ರ ಮೋಹನ್, ನಿರ್ದೇಶಕ ಅಭಿ. ಎನ್, ನಾಯಕ ನಟ ಪಂಚಾಕ್ಷರಿ, ನಟರಾದ ಸಂತೋಷ್ ಕೊಲ್ಯ, ಸಮರ್ಥ್, ನಟಿ ದಿವ್ಯಶ್ರೀ ಕಾವೂರು , ಸಹ ನಿರ್ದೇಶಕ ಜೈ ಚಂದ್ರ ಹಾಗೂ ಗೀತೆ ರಚನೆಕಾರ ಅನುತ್ತಮ್ ಉಪಸ್ಥಿತರಿದ್ದರು..ಶ್ರೇಯಾದಾಸ್ ಕಾರ್ಯಕ್ರಮ ನಿರೂಪಿಸಿದರು.



