ಮೋದಿ ಬ್ರಿಗೇಡ್ ಉದ್ಘಾಟನಾ ಕಾರ್ಯಕ್ರಮವು ಜನವರಿ 21ರಂದು ಟಿವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನವ ಭಾರತ್ ಸರ್ಕಲ್ ಮಂಗಳೂರು ಇಲ್ಲಿ ವಿದ್ಯುಕ್ತವಾಗಿ ಜರಗಿತು

ಅಭಿವೃದ್ಧಿಪಥದಲ್ಲಿ ವೇಗವಾಗಿ ಸಾಗುತ್ತಿರುವ ಶಕ್ತಿ ಶಾಲಿ ಭಾರತ ನಿರ್ಮಾಣದ ಸಂಕಲ್ಪಕ್ಕೆ ಬಲತುಂಬಲವ ಸಲುವಾಗಿ ಮತ್ತೊಮ್ಮೆ ಮೋದಿ ಎಂಬ ಘೋಷಣೆಯ ಯುವ ಚೈತನ್ಯದೊಂದಿಗೆ ಮೋದಿ ಬ್ರಿಗೇಡ್ ಉದ್ಘಾಟನಾ ಕಾರ್ಯಕ್ರಮವು ಜನವರಿ 21ರಂದು ಟಿವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನವ ಭಾರತ್ ಸರ್ಕಲ್ ಮಂಗಳೂರು ಇಲ್ಲಿ ವಿದ್ಯುಕ್ತವಾಗಿ ಜರಗಿತು. ಕಾರ್ಯಕ್ರಮವು ತುಳುನಾಡ ಗಾನಗಂಧರ್ವ ಶ್ರೀ ಜಗದೀಶ್ ಪುತ್ತೂರು ಇವರ ಗಾನಸುಧೆಯೊಂದಿಗೆ ಪ್ರಾರಂಭವಾಗಿ ಅತಿಥಿ ಗಣ್ಯರನ್ನು ಚೆಂಡೆ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀ ಶಿವಪ್ರಸಾದ್ ರವರ ಸ್ವಾಗತ ಭಾಷಣದೊಂದಿಗೆ ಮೋದಿ ಬ್ರಿಗೇಡಿನ ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಕಾವೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಸುದರ್ಶನ್, ಉಪಮೇಯರ್ ಸುನಿತಾ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಮೋದಿ ಬ್ರಿಗೇಡಿನ ಗೌರವಾಧ್ಯಕ್ಷರಾದ ಶ್ರೀ ದಿನೇಶ್ ಕೆ ಉರ್ವ ಹಾಗೂ ಅಧ್ಯಕ್ಷರಾದ ಪದ್ಮರಾಜ್ ಉಪಸ್ಥಿತರಿದ್ದರು. ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯವಾದಿ ಶ್ರೀಮತಿ ವೀರಾ ರಾಘವೇಂದ್ರ ನೆರವೇರಿಸಿದರು. ಶ್ರೀಮತಿ ಪವಿತ್ರ ಪದ್ಮರಾಜ್ ರವರು ಧನ್ಯವಾದ ಸಮರ್ಪಣೆಯೊಂದಿಗೆ ಶ್ರೀಶೈಲೇಶ್ ರೈ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು,.

News Editor

Learn More →

Leave a Reply

Your email address will not be published. Required fields are marked *