ಗ್ಯಾಸ್‌ ರೀಫಿಲ್ಲಿಂಗ್‌ ಅಡ್ಡೆಗೆ ಎಸಿಪಿ ಧನ್ಯ ನಾಯಕ್ ಮತ್ತು ತಂಡ ದಾಳಿ : ಆರೋಪಿಯ ಬಂಧನ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕೋಟೆಪುರದ ಬರಕ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲೇ ನಡೆಯುತ್ತಿದ್ದ ಗ್ಯಾಸ್‌ ರೀಫಿಲ್ಲಿಂಗ್‌ ಅಡ್ಡೆಗೆ ಎಸಿಪಿ ಧನ್ಯ ನಾಯಕ್ ಮತ್ತು ತಂಡ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ ಗ್ಯಾಸ್‌ ಸಿಲಿಂಡ‌ರ್ ಮತ್ತು ಸುಮಾರು 280 ಲೀಟ‌ರ್ ಪೆಟ್ರೋಲನ್ನ ಜಪ್ತಿಗೊಳಿಸಿದ್ದು ಆರೋಪಿ ಅಬ್ದುಲ್ ಅಲ್ತಾಫ್ (49)ನನ್ನ ಬಂಧಿಸಿದ ಘಟನೆ ನಡೆದಿದೆ.

ಕೋಟೆಪುರದ ರಸ್ತೆ ಬದಿಯ ಮನೆಯಲ್ಲೇ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿ ಅಲ್ತಾಪ್ ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟಲ್ಲದೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ಸಮೇತ ಸಿಬ್ಬಂದಿಗಳಾದ ರಿಜಿ, ಸಾಜು ನಾಯ‌ರ್, ಮಹೇಶ್‌, ಅಕ್ಟರ್ ನೇತೃತ್ವದ ತಂಡ ಗುರುವಾರದಂದು ದಿಢೀರ್ ದಾಳಿ ನಡೆಸಿದ್ದು ಸುಮಾರು 55ಕ್ಕೂ ಮಿಕ್ಕಿದ ಗ್ಯಾಸ್ ಸಿಲಿಂಡ‌ರ್ ಮತ್ತು 280 ಲೀಟ‌ರ್ ನಷ್ಟು ಅಕ್ರಮ ದಾಸ್ತಾನು ಇರಿಸಿದ್ದ ಪೆಟ್ರೋಲನ್ನ ವಶ ಪಡಿಸಿದ್ದು ಆರೋಪಿ ಅಲ್ತಾಪ್ ನನ್ನು ಬಂಧಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *