
ಆನೆಗಳ ಹಿಂಡಿನಿಂದ ಮರಿ ಆನೆಯೊಂದು ತಪ್ಪಿಸಿಕೊಂಡ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಕನ್ಯಾನದಲ್ಲಿ ನಡೆದಿದೆ.
ಮಂಡಿಕೋಲು ಪರಿಸರದಲ್ಲಿದ್ದ ಆನೆಗಳ ಹಿಂಡಿನಿಂದ ಮರಿ ಆನೆಯೊಂದು ತಪ್ಪಿಸಿಕೊಂಡು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಲೇ ಆಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಆನೆಯನ್ನು ರಕ್ಷಿಸಿದ್ದಾರೆ. ಇದೀಗ ಆನೆ ಮರಿಯು ಅರಣ್ಯಾಧಿಕಾರಿಗಳ ಬಳಿಯಿದ್ದು ಆರೈಕೆ ಮಾಡಲಾಗುತ್ತಿದೆ



