
ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಇಲ್ಲಿನ ಠಾಣಾ ಪಿಎಸ್ಐ ಪ್ರಸನ್ನ ಎಂ.ಎಸ್. ಅವರು ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೊಪ್ಪಲದ ಮಣ್ಣುರಸ್ತೆಯಲ್ಲಿ ಚಕ್ರ ಹೂತ ಸ್ಥಿತಿಯಲ್ಲಿದ್ದ ಟಿಪ್ಪರ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದು ಸುಮಾರು 10 ಸಾ. ರೂ. ಮೌಲ್ಯದ ಒಂದೂವರೆ ಯುನಿಟ್ ಮರಳು ಪತ್ತೆಯಾಗಿದೆ. ಟಿಪ್ಪರ್ ಸಹಿತ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಟಿಪ್ಪರ್ ಲಾರಿ ಚಾಲಕನು ಪರಾರಿಯಾಗಿದ್ದಾನೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


