
ತುಳು ರಂಗಭೂಮಿಯ ಉದಯೋನ್ಮುಖ ಯುವಕಲಾವಿದ ಪಿಂಗಾರ ಕಲಾವಿದೆರ್ ಬೆದ್ರ ತಂಡದ ಜನಪ್ರಿಯ ನಾಟಕ ‘ಕದಂಬ’ ಇದರ ನಟ ವಗ್ಗ ನಿವಾಸಿ ಗೌತಮ್ ಕುಲಾಲ್ ವಗ್ಗ (28) ಇಂದು ನಸುಕಿನ ಜಾವ ಬಂಟ್ವಾಳದ ವಗ್ಗದಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾರೆ. ಬೆಳುವಾಯಿಯ ಕರಿಯನಂಗಡಿಯಲ್ಲಿ ನಿನ್ನೆ ರಾತ್ರಿ ಕದಂಬ ನಾಟಕದಲ್ಲಿ ಅಭಿನಯಿಸಿ ವಾಪಾಸು ಮನೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಮೃತರು ತಮ್ಮ ಮನೆಯವರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


