ಹಿಂದೂ ಹುಲಿ ಹಾಗೂ ಬಿಜೆಪಿಯ ಬಲಿಷ್ಠ ನಾಯಕನ ಸ್ವಕ್ಷೇತ್ರಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ

ಹಿಂದೂ ಹುಲಿ ಹಾಗೂ ಬಿಜೆಪಿಯ ಬಲಿಷ್ಠ ನಾಯಕನ ಸ್ವಕ್ಷೇತ್ರಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ ನೀಡಿದರು. ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಆಗಮನದ ಹಿನ್ನೆಲೆಯಲ್ಲಿ ಬಸವರಾಜ್ ಯತ್ನಾಳ್ ಅವರ ಸ್ವಕ್ಷೇತ್ರದಲ್ಲಿ ಫ್ಲೆಕ್ಸ್ ಬ್ಯಾನರ್ ಗಳನ್ನ ಅಳವಡಿಸಿದ್ದು ಅದ್ಯಾವುದರಲ್ಲೂ ಬಸವರಾಜ್ ಯತ್ನಾಳ್ ಅವರ ಫೋಟೋಗಳು ಕಾಣಿಸಿಕೊಳ್ಳುತ್ತಿಲ್ಲವಾದ್ದರಿಂದ ಬಿಜೆಪಿಯ ನಾಯಕರಲ್ಲಿ ಹಾಗೂ ಜನರಲ್ಲಿ ಬಿಜೆಪಿ ಒಳಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಗೊಂದಲ ಸೃಷ್ಟಿಯಾಗಿದೆ. ಎಲ್ಲಾ ಕಡೆಯೂ ಬಿ ವೈ ವಿಜಯೇಂದ್ರ ಅವರ ಆಗಮನದ ಫೋಟೋಗಳು ಕಾಣಿಸುತ್ತಿದ್ದು, ಅದರೊಂದಿಗೆ ಮುರುಗೇಶ್ ನಿರಾಣಿ, ನರೇಂದ್ರ ಮೋದಿ, ಪಾಟೀಲ್ , ಯಡಿಯೂರಪ್ಪ, ಹಾಗು ಇತರ ಬಿಜೆಪಿ ಲೋಕಲ್ ಲೀ ಡ ರ್ ಗಳ ಭಾ ವ ಚಿತ್ರಗಳು ಕಾಣುತ್ತಿದ್ದು ತಮ್ಮದೇ ಕ್ಷೇತ್ರದಲ್ಲಿ ಶಾಸಕರಾದ ಬಸವರಾಜ್ ಯತ್ನಾಳ್ ಅವರ ಫೋಟೋ ಮಾತ್ರ ಇಲ್ಲದಿರುವುದು ಯಾಕೆ ಎಂಬುದು ಎಲ್ಲರಲ್ಲೂ ಯಕ್ಷ ಪ್ರಶ್ನಯಾಗಿದೆ. ಇನ್ನು ಈ ಹಿಂದೆ ಬಸವನಗೌಡ ಪಾಟೀಲ್ ಅವರು ಮನೆಯ ಒಳಗೂ ಸೇರಿಸಲ್ಲ ಎಂದು ತಾಕಿತು ಹಾಕಿದ್ದರು ಆದರೆ ಅದೇ ಮನೆಗೆ ಮರಿ ಹುಲಿ ವಿಜಯೇದ್ರ ಅವರು ಕಾಲಿಟ್ಟಿದ್ದಾರೆ. ಎಸ್ಟೆಲ್ಲ ಗೊಂದಲಗಳಿದ್ದರೂ ವಿಜಯಪುರದಲ್ಲಿ ಇಂದು ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದರು. ಈ ಸಂದರ್ಭ ದಲ್ಲಿ ವಿಜಯೇಂದ್ರ.

ಜ್ಞಾನ ಗುಮ್ಮಟ ಆಗಿರುವ ವಿಜಯಪುರ ಜಿಲ್ಲೆಯು ಪಕ್ಷದ ಸುಭದ್ರ ಕೋಟೆಯಾಗಿದ್ದು ಮುಂಬರುವ ದಿನಗಳಲ್ಲಿ ಲೋಕಸಮರ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಗದುೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಹಗಲಿರುಲೆನ್ನದೇ ಶ್ರಮಿಸಬೇಕೆಂದು ಕರೆ ನೀಡಿದರು.

News Editor

Learn More →

Leave a Reply

Your email address will not be published. Required fields are marked *