ಬೈಂದೂರು: ಭೀಕರ ಅಪಘಾತ : ಕಾರು ಡಿವೈಡ‌ರ್ ಏರಿ ಲೈಟ್ ಕಂಬಕ್ಕೆ ಢಿಕ್ಕಿ : ಚಾಲಕ ಸಾವು

ಬೈಂದೂರು: ಕಂಬದಕೋಣೆ ರಾ.ಹೆದ್ದಾರಿ 66ರಲ್ಲಿ ಕಾರೊಂದು ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನ ಚಾಲಕ  ಗಂಭೀರ ಗಾಯಗೊಂಡ ಘಟನೆ  ಕಂಬದಕೋಣೆ ಜಂಕ್ಷನ್  ಸಮೀಪ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.

ಕಾರವಾದಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆಕಾರು ಚಾಲಕ ಪ್ರದ್ಯೋತ್ ಮೃತಪಟ್ಟ ದುರ್ದೈವಿ ಎಂದು ತಿಳಿದು ಬಂದಿದೆ.

ಸ್ಥಳೀಯರ ಸಹಾಯದಿಂದ ಕಾರಿನೊಳಕ್ಕೆ ಸಿಲುಕಿದ ವ್ಯಕ್ತಿಯನ್ನು ಹೊರ ತೆಗೆದು ಬೈಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರು.ಹೆಚ್ಚಿನ  ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷೀಸಿದ ವೈದ್ಯರು ಮ್ರತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸ್ಥಳಕ್ಕೆ ಬೈಂದೂರು ಪಿ.ಎಸ್.ಐ ತಿಮ್ಮೇಶ್ ಬಿ.ಎನ್.ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.ಸ್ಥಳಕ್ಕೆ ಐಆರ್‌ಬಿ ಸಿಬ್ಬಂದಿಯವರು ಆಗಮಿಸಿ, ರಸ್ತೆಯನ್ನು ಸ್ವಚ್ಛತೆ ಗೊಳಿಸಿ ಸುಗಮ ಸಂಚಾರಕ್ಕೆ ಅನು ಮಾಡಿಕೊಟ್ಟರು.

News Editor

Learn More →

Leave a Reply

Your email address will not be published. Required fields are marked *