ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಅನ್ಯಕೋಮಿನ ಜೋಡಿಯನ್ನ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಉಳ್ಳಾಲ ತಾಲೂಕಿನ ಕುಂಪಲದಲ್ಲಿ ನಡೆದಿದ್ದು ಅಪ್ರಾಪ್ತೆ ಹಿಂದೂ ಬಾಲಕಿ ಜತೆಗಿದ್ದ ಮುಸ್ಲಿಮ್ ಯುವಕನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಉಳ್ಳಾಲ, ಡಿ.29: ಬಾಡಿಗೆ ಮನೆಯೊಂದರಲ್ಲಿ ಅನ್ಯಕೋಮಿನ ಜೋಡಿಯನ್ನ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಉಳ್ಳಾಲ ತಾಲೂಕಿನ ಕುಂಪಲದಲ್ಲಿ ನಡೆದಿದ್ದು ಅಪ್ರಾಪ್ತೆ ಹಿಂದೂ ಬಾಲಕಿ ಜತೆಗಿದ್ದ ಮುಸ್ಲಿಮ್ ಯುವಕನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕುಂಪಲ, ಬೈಪಾಸಿನ ಬಾಡಿಗೆ ಮನೆಯೊಂದರಲ್ಲಿ ಅಪ್ರಾಪ್ತೆ ಹಿಂದೂ ಬಾಲಕಿಯೊಂದಿಗೆ ನೆಲೆಸಿದ್ದ ತೀರ್ಥಹಳ್ಳಿ ನಿವಾಸಿ ರಾಝಿನ್ (25) ಎಂಬಾತನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. .
ರಾಝಿನ್ ಜತೆ ವಾಸವಿದ್ದ ಅಪ್ರಾಪ್ತ ಬಾಲಕಿಯನ್ನ ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಸಾಂತ್ವನ ಕೇಂದ್ರಕ್ಕೆ ದಾಖಲಿಸಿ ಸಮಾಲೋಚನೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿಯ ಅನ್ಯಕೋಮಿನ ಜೋಡಿ ಹೇಗೆ, ಯಾಕಾಗಿ ಕುಂಪಲದಲ್ಲಿ ನೆಲೆಸಿದ್ದರು ಎಂಬುದರ ಬಗ್ಗೆ ಉಳ್ಳಾಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
