ಪುತ್ತೂರು: ವಿಷ ಪದಾರ್ಥ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ನೈತ್ತಾಡಿ ಕಲ್ಲುಗುಡ್ಡೆ ಸೆಲೂನ್ ಮಾಲಕ ರತ್ನಾಕರ ಭಂಡಾರಿ ಅವರು ಡಿ.೨೮ರ ತಡ ರಾತ್ರಿ ಮೃತಪಟ್ಟಿದ್ದಾರೆ.

ಆರ್ಯಾಪು ಗ್ರಾಮದ ಕಾರ್ಪಾಡಿ ನಿವಾಸಿಯಾಗಿರುವ ರತ್ನಾಕರ ಭಂಡಾರಿ ಅವರು ನೈತ್ತಾಡಿ ಕಲ್ಲುಗುಡ್ಡೆಯಲ್ಲಿ ಸೆಲೂನ್ ನಡೆಸುತ್ತಿದ್ದರು. ಡಿ.೨೮ರಂದು ಸೆಲೂನಿಗೆ ಬಂದಿದ್ದ ಅವರು ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಡಿ.೨೮ರ ತಡ ರಾತ್ರಿ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರತ್ನಾಕರ ಭಂಡಾರಿ ಅವರು ಸವಿತಾ ಸಮಾಜದ ಕುಂಬ್ರ ವಲಯದ ಅಧ್ಯಕ್ಷರಾಗಿದ್ದರು ಎಂದು ಸವಿತಾ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *