
ಕಂಪೌಂಡ್ ನಿರ್ಮಾಣಕ್ಕೆ ಮಣ್ಣು ಆಗೇದು ಪಾಯ ಮಾಡುತಿದ್ದ ವೇಳೆ ಗುಡ್ಡ ಜರಿದು ಮಣ್ಣಿನೊಳಗೇ ಒಬ್ಬ ಕಾರ್ಮಿಕರು ಸಿಲುಕಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಳುಕಿನ ಸೂರಿಕುಮೇರ್ ಸಮೀಪ ಕಾಯರಡ್ಕ ಯೆಂಬಳ್ಳಿ ನಡೆದಿದೆ.


ಬಂಟ್ವಾಳ ತಾಳುಕಿನ ಸೂರಿಕುಮರ್ ಸಮೀಪದ ಕಾಯರಡುಕ ಯೆಂಬಳ್ಳಿ ಜೆಸಿಂತಾ ಮಾರ್ಟಿಸ್ ಯಂಬುವವರ ಮನೆಯ ಕಂಪೌಂಡ್ ನಿರ್ಮಾಣಕ್ಕೆ ಮಣ್ಣು ಆಗೇದು ಪಾಯ ಮಾಡುತಿದ್ದ ವೇಳೆ ಇದ್ದಕಿದ್ದಂತೆ ಗುಡ್ಡ ಜಾರಿ ಅಲ್ಲಿ ಕೆಲ್ಸ ಮಾಡುತಿದ್ದ ಕಾರ್ಮಿಕರಿಗೆ ಮಣ್ಣು ಮೇಲೆ ಬಿತ್ತು.

ಎಚ್ಚತುಗೊಂಡ ಕಾರ್ಮಿಕರ ರಕ್ಷಣೆಗೆ ಮುಂದಾಗಿ ಕಾರ್ಮಿಕರನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ತುಂಬೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.ಘಟನ ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್.ಹೆಚ್ ,ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


