ಉಳ್ಳಾಲ ತಾಲೂಕಿನ ಕೋಟೆಪುರದಲ್ಲಿ ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರುವ ಫಿಶ್ ಮಿಲ್ ಗಳ ಬಗ್ಗೆ ಸ್ಟಾರ್ ಆಫ್ ಕುಡ್ಲ ವರದಿಯ ಇಂಪ್ಯಾಕ್ಟ್

ಉಳ್ಳಾಲ ತಾಲೂಕಿನ ಕೋಟೆಪುರದಲ್ಲಿ ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರುವ ಫಿಶ್ ಮಿಲ್ ಗಳ ಬಗ್ಗೆ ಸ್ಟಾರ್ ಆಫ್ ಕುಡ್ಲ ವರದಿಯ ಇಂಪ್ಯಾಕ್ಟ್ ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ ಕೋಟೆಪುರದಲ್ಲಿ ತಲೆ ಎತ್ತಿರುವ ಫಿಶ್ ಮಿಲ್ ಗಳಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮ್ಮ ಸ್ಟಾರ್ ಆಫ್ ಕುಡ್ಲ ಚಾನೆಲ್ ವರದಿಯನ್ನು ಬಿತ್ತರಿಸಿತು. ಇದೀಗ ನಮ್ಮ ವರದಿಯಿಂದ ಎಚ್ಚೆತ್ತುಕೊಂಡ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವರ್ತರಾಗಿ ತಾತ್ಕಾಲಿಕವಾಗಿ ಫಿಶ್ ಮಿಲ್ ಗಳ ಕೆಲಸ ಕಾರ್ಯಗಳನ್ನ ತಡೆಹಿಡಿದಿದ್ದಾರೆ. ಇದು ಸ್ಟಾರ್ ಆಫ್ ಕುಡ್ಲ ಚಾನೆಲ್ ಇನ್ಫ್ಯಾಕ್ಟ್ ಆಗಿದೆ.

ಉಳ್ಳಾಲ ತಾಲೂಕಿನ ಕೋಟೆಪುರ ನೇತ್ರಾವತಿ ನದಿ ಕಿನಾರೆಗೆ ತಾಗಿಕೊಂಡು ಎದ್ದು ನಿಂತಿರುವ ಫಿಶ್ ಮಿಲ್ ಗಳಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲಿನ ಪರಿಸರವಾಸಿಗಳು ರೋಗರುಜಿನಗಳಿಂದ ಬಳಲುತ್ತಿರುದ್ದರು ಅಷ್ಟೇ ಅಲ್ಲ ತ್ಯಾಜ್ಯ ವಸ್ತುಗಳನ್ನ ನೇರವಾಗಿ ಪೈಪ್ ಮುಖಾಂತರ ನೇತ್ರಾವತಿ ನದಿಗೆ ಬಿಡುವ ಕಾರಣ ಮೀನುಗಳ ಸಂತತಿಯು ನಾಶವಾಗುತ್ತಿತ್ತು.

ಇದರಿಂದ ಮೀನುಗಾರರು ಮೀನುಗಾರಿಕೆ ಇಲ್ಲದೆ ಸಂಕಷ್ಟದಲ್ಲಿರುದಾಗಿಯು ಆರೋಪಗಳು ಕೇಳಿಬಂದಿತ್ತು ಅಷ್ಟೇ ಅಲ್ಲದೆ ನದಿ ತೀರದಲ್ಲಿ ಮೀನುಗಾರರಿಗೆ ಬೋಟ್ ನಿಲ್ಲಿಸಲು ಸರಕಾರದ ಪರವಾನಿಗೆ ಇರುವ ಜಾಗವನ್ನ ಅತಿಕ್ರಮಣ ಮಾಡುತ್ತಿರುವ ಸುಮಾರು 13 ಫ್ಯಾಕ್ಟರಿಗಳಿಗೆ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂಬ ದೂರು ಕೂಡ ಸಾರ್ವಜನಿಕರಿಂದ ಕೇಳಿ ಬಂದಿತ್ತು ಇಲ್ಲಿನ ಸಮಸ್ಯೆಯ ಬಗ್ಗೆ ನಮ್ಮ ಸ್ಟಾರ್ ಆಫ್ ಕುಡ್ಲ ಚಾನೆಲ್ ಈ ಹಿಂದೆ ಸಚಿತ್ರ ವರದಿಯನ್ನ ಬಿತ್ತರಿಸಿತು. ನಮ್ಮ ವರದಿಯಿಂದ ಎಚ್ಚೆತ್ತುಕೊಂಡ ಸಾರ್ವಜನಿಕರು ಹಾಗೂ ಸಂಘಟನೆಗಳ ದೂರು ಹಾಗೂ ಪ್ರತಿಭಟನೆಗಳಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವರ್ತರಾಗಿ ಇದೀಗ ತಾತ್ಕಾಲಿಕವಾಗಿ ಫಿಶ್ ಮಿಲ್ ಗಳ ಕೆಲಸ ಕಾರ್ಯಗಳನ್ನು ತಡೆಹಿಡಿದಿದ್ದು ಇದರಿಂದ ಅಲ್ಲಿನ ಪರಿಸರವಾಸಿಗಳು ಸ್ವಲ್ಪ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.

News Editor

Learn More →