ಪುತ್ತಿಲ ಪರಿವಾರ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಿಗೆ ಚುನಾವಣಾ ನೋಡಲ್ ಅಧಿಕಾರಿಯಿಂದ ನೋಟಿಸ್

 ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ತನ್ನ ಕರಪತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಪುತ್ತಿಲ ಪರಿವಾರ ಚಿನ್ಹೆ ಪ್ರಕಟಿಸಿ ಹಂಚುತ್ತಿದ್ದಾರೆ ಎಂಬ ಆರೋಪದಲ್ಲಿ ಪುತ್ತಿಲ ಪರಿವಾರ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಿಗೆ ಚುನಾವಣಾ ನೋಡಲ್ ಅಧಿಕಾರಿಯಿಂದ ನೋಟಿಸ್ ನೀಡಲಾಗಿದೆ.

ಪುತ್ತೂರು ನಗರಸಭಾ ಉಪಚುನಾವಣೆ ಕಾರ್ಯಕಲಾಪಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಎಂಬ ಸಂಘಟನೆಯ ಬೆಂಬಲಿತ ಅಭ್ಯರ್ಥಿಗಳಾದ ಶ್ರೀಮತಿ ಅನ್ನಪೂರ್ಣ ಎಸ್ ಕೆ ರಾವ್ ಹಾಗೂ ಚಿಂತನ್ ಪಿ ಎಂಬ ಅವರು ಪತ್ರಿಕೆಗಳಲ್ಲಿ ಶ್ರೀ ಮಹಲಿಂಗೇಶ್ವರ ದೇವರ ಚಿತ್ರವನ್ನು ಹಾಗೂ ಪುತ್ತಿಲ ಪರಿವಾರ ಎಂಬ ಚಿಹ್ನೆ ಪ್ರಕಟಿಸುತ್ತಿದ್ದು ಮತದಾರರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಿದೆ. ಪುತ್ತೂರು 11ನೇ ವಾರ್ಡಿನಲ್ಲಿ ನೆಲ್ಲಿಕಟ್ಟೆಯ ವ್ಯಾಪ್ತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮತದಾರರಿಗೆ ಪುತ್ತಿಲ ಪರಿವಾರದಿಂದ ರಾಜಕೀಯ ದೃಷ್ಟಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕರ ಪತ್ರ ಹಂಚುವ ಮೂಲಕ ಮತದಾನಕ್ಕೆ ಆಮೀಷಯೊದುತ್ತಿದ್ದಾರೆ. ಹಣದ ಲಾಬಿ ಯು, ಉಚಿತ ಊಟ ಬಟ್ಟೆ ದೇವರ ಪ್ರಸಾದ ನೀಡುವ ಆಮೀಷವನ್ನು ಈ ಕಾರ್ಯಕ್ರಮದ ಮುಖಾಂತರ ಪುತ್ತಿಲ ಪರಿವಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿ ಇಂದ ನೋಟಿಸ್ ನೀಡಲಾಗಿದ್ದು, ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಂಬಂಧಿಸಿದ ಫಲಕಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

News Editor

Learn More →