
ಭಾರತೀಯ ಜನತಾ ಪಾರ್ಟಿ
ಮಂಗಳೂರು ವಿಧಾನಸಭಾ ಕ್ಷೇತ್ರ
ಮಂಗಳೂರು ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಜೀ ಅವರ ಮನ್ ಕಿ ಬಾತ್ ಕಾರ್ಯಕ್ರಮವು ಅಲ್ಪಸಂಖ್ಯಾತ ಮೋರ್ಚಾದ ಮಂಡಲ ಅಧ್ಯಕ್ಷರ ನಿವಾಸದಲ್ಲಿ ವೀಕ್ಷಣೆ ಮಾಡಲಾಯಿತು, ಹಾಗೂ ಈ ದೇಶ ಕಂಡಂತಹ ಅದ್ಭುತ ಪ್ರತಿಭೆ “ದಿ ಮಿಸೈಲ್ ಮ್ಯಾನ್” ಎಂದೇ ಪ್ರಖ್ಯಾತಿಗಳಿಸಿರುವ ಮಾಜಿ ರಾಷ್ಟ್ರಪತಿಗಳಾಗಿ ಸೇವೆಸಲ್ಲಿಸಿ 140 ಕೋಟಿ ಭಾರತೀಯರ ಮನಗೆದ್ದಂತಹ “ಸನ್ಮಾನ್ಯ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ” ರವರ 9ನೇ ಪುಣ್ಯತಿಥಿಯ ಅಂಗವಾಗಿ ಅವರ ಭಾವಚಿತ್ರವನ್ನು ಇಟ್ಟು ಅವರನ್ನು ಮಂಗಳೂರು ಮಂಡಲ ಅಲ್ಪಸಂಖ್ಯಾತ ಮೋರ್ಚಾ ದ ಅಧ್ಯಕ್ಷರಾದ ಕರೀಂ ಉಚ್ಚಿಲ ಅವರನಿವಾಸದಲ್ಲಿ,ಸ್ಮರಿಸಲಾಯಿತು,ಮುಖ್ಯಅತಿಥಿಯಾಗಿ ಪ್ರಭಾರ ಅಧ್ಯಕ್ಷರಾದ ಹೇಮಂತ್ ಶೆಟ್ಟಿ, ರಾಜ್ಯ ಮೀನುಗಾರರ ಪ್ರಕೋಸ್ಟದ ಸಹ ಸಂಚಾಲಕರಾದ ಯಶವಂತ ಅಮೀನ್ ಕಲಾಂ ಅವರ ಬಗ್ಗೆ ಹಿತನುಡಿಗಳನ್ನು ನೀಡಿದರು, ಮಂಡಲದ ಮುಖಂಡರಿಗೆ ಮೋರ್ಚಾದ ವತಿಯಿಂದ ಸಾಲು ಹೋದಿಸಿ ಗೌರವಿಸಲಾಯಿತು, ಮಂಡಲ ಉಪಾಧ್ಯಕ್ಷರಾದ ರವಿಶಂಕರ್, ಮಂಡಲ ಪ್ರಧಾನ ಕಾರ್ಯದರ್ಶಿಯಾದ ದಯಾನಂದ್ ತೊಕ್ಕೋಟ್, ಪುರಸಭೆ ಸದಸ್ಯರಾದ ಜಯಶ್ರೀ, ಬೂತ್ ಅಧ್ಯಕ್ಷರಾದ ಶಶಿಕಾಲ, ಮೋರ್ಚಾದ ಅಧ್ಯಕ್ಷರಾದ ಕರೀಂ ಉಚ್ಚಿಲ್, ಮೋರ್ಚದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ವಿಲ್ಫರ್ಡ್ ಸಲ್ದಾನ, ಸಿರಾಜು ಮುಡಿಪು,ಜಿಲ್ಲಾ ನಾಯಕರದ ಶಾನವಾಜ್ ಹುಸೇನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದಿಕ್,ಅಶ್ರಫ್ ಮಾರಿಪಲ್ಲ, ಆಸ್ಗಾರ್ ಮುಡಿಪು, ರಹಮತ್ ಅಲಿ ಕಿನ್ಯ, ಮತ್ತು ರಾಜೇಶ್ ರಂಜಿತ್ ಹನಿ ಹಿಂದುಸ್ತಾನಿ ವಿನೋದ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









