ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಆಯ್ಕೆ.

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ 14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಆಯ್ಕೆ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಸಮಿತಿಯ ಸಂಚಾಲಕರಾಗಿ ಪುತ್ತೂರು ಉಮೇಶ್ ನಾಯಕ್,ಸಮಿತಿಯ ಕಾರ್ಯದರ್ಶಿಯಾಗಿ ಜಗದೀಶ್ ನಿರ್ಪಾಜೆ,ಕೋಶಾಧಿಕಾರಿಯಾಗಿ ಹರೀಶ್ ಕುಮಾರ್ ದೋಳ್ಪಾಡಿ ಆಯ್ಕೆಯಾಗಿದ್ದಾರೆ.


ಹಾಗೂ ಉಪಧ್ಯಾಕ್ಷರುಗಳಾಗಿ ವಿರೂಪಾಕ್ಷ ಭಟ್ ಮಚ್ಚಿಮಲೆ,ಶ್ರೀಮತಿ ವಿ ಪ್ರಭಾವತಿ ಬೊಳುವಾರು, ಸಚಿನ್ ಶೆಣೈ, ಮೋಹನ್ ಅತ್ಲಾಜೆ ಆಯ್ಕೆಯಾಗಿದ್ದಾರೆ, ಸಹ ಕಾರ್ಯದರ್ಶಿಗಳಾಗಿ ಜೀವನ್ ಆಚಾರ್ಯ ಬಲ್ನಾಡು,ಅನಿಲ್ ಇರ್ದೆ, ಶ್ರೀಮತಿ ಶರಾವತಿ ರವಿನಾರಾಯಣ,ಶ್ರೀದೇವಿ ಪುತ್ತೂರು ಮತ್ತು ಸಹ ಕೋಶಾಧಿಕಾರಿಗಳಾಗಿ ಸಂದೀಪ್ ಸಿಂಗಾಣಿ ,ಶೈಲೇಶ್ ನೈತಾಡಿ ಇವರು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಅಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಪದಾಧಿಕಾರಿಗಳು, ಪ್ರಖಂಡದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *