
ತಲಪಾಡಿ ಟೋಲ್ ಪ್ಲಾಝಾ ಸುತ್ತಲ ಅಂಗಡಿ ತೆರವು ಕಾರ್ಯಾಚರಣೆ ಉಳ್ಳವರ ಪರವಹಿಸಿದ ತಲಪಾಡಿ ಗ್ರಾಮ ಪಂಚಾಯತ್?????
ಉಳ್ಳಾಲ : ತಲಪಾಡಿ ಟೋಲ್ ಪ್ಲಾಝಾ ಸುತ್ತ ನಿರ್ಮಿಸಲಾದ ಅಂಗಡಿಗಳನ್ನು ತೆರವುಗೊಳಿಸಿ ಒಂದು ಕಣ್ಣಿಗೆಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ವರ್ತಿಸುತ್ತಿದೆ ಎಂದು ರಸ್ತೆ ಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಕುಂದಾಪುರದಿಂದ ತಲಪಾಡಿವರೆಗಿನ ರಾ.ಹೆ.ಯಲ್ಲಿರುವ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋಟ್೯ ಆದೇಶಿಸಿದೆ. 2024 ರ ಮಾಚ್೯ ತಿಂಗಳಿನಲ್ಲಿ ಆದೇಶ ಬಂದಿತ್ತು. ಅದರಂತೆ ವ್ಯಾಪಾರಿಗಳೇ ತೆರವು ನಡೆಸಲು ಧ್ವನಿವರ್ಧಕದಲ್ಲಿ ತಿಳಿಸಲಾಗಿತ್ತು. ಆದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಮಾಚ್೯ ತಿಂಗಳಲ್ಲಿ ಅಂಗಡಿ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟೀಸು ನೀಡಲಾಗಿತ್ತು. ನೋಟೀಸು ನೀಡಿ ಮೂರು ತಿಂಗಳು ಕಳೆದರೂ , ಕೆಲವರು ಅಂಗಡಿಗಳನ್ನು ಒಳಬಾಡಿಗೆಗೆ ನೀಡಿ ಮೋಸ ಮಾಡಿದರೆ, ಇನ್ನು ಕೆಲವರು ಲಕ್ಷಾಂತರ ಬೆಲೆಗೆ ಮಾರಾಟವನ್ನೇ ಮಾಡಿದ್ದಾರೆ. ಇನ್ನು ಕೆಲವರು ಅಂಗಡಿಗಳಲ್ಲೇ ಉಳಿದಿದ್ದರು. ಮತ್ತೆ ಸುಪ್ರೀಂ ಕೋಟ್೯ ಪ್ರಶ್ನಿಸುವ ಮುನ್ನ ಕಾರ್ಯಾಚರಣೆ ನಡೆದಿದೆ.
‘ಸುಪ್ರೀಂ ಕೋರ್ಟಿನ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಹಾಕಿರುವ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಬೇಕಿದೆ. ಎಪ್ರಿಲ್ ತಿಂಗಳಲ್ಲೇ ಕಾರ್ಯಾಚರಣೆ ನಡೆಸಬೇಕಿತ್ತು. ಆದರೆ ಮಾನವೀಯತೆ ನೆಲೆಯಲ್ಲಿ ತಡ ಮಾಡಿ ಇಂದು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಇದೀಗ ಸ್ಥಳೀಯರ ಹಾಗೂ ಅಂಗಡಿ ಮಾಲೀಕರ ಮನವಿಯ ಮೇರೆಗೆ ಜು. 20 ರ ವರೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಎಲ್ಲವನ್ನೂ ಅಂಗಡಿ ಮಾಲೀಕರೇ ತೆರವುಗೊಳಿಸಬೇಕಿದೆ. ಇಲ್ಲವಾದಲ್ಲಿ ನಾವಾಗಿಯೇ ನೆಲಸಮಗೊಳಿಸುತ್ತೇವೆ. ಕಂಪೆನಿ ಕೈಗೊಂಡ ನಿರ್ಧಾರವಲ್ಲ, ಸುಪ್ರೀಂ ಕೋಟ್೯ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾಲಿಸಲೇ ಬೇಕಿದೆ. ಪ್ಲಾಝಾ ಸುತ್ತ ಸೇರಿದಂತೆ ಹೆದ್ದಾರಿ 90-60 ಫೀಟ್ ಗಳಲ್ಲಿ
ಕುಂದಾಪುರದಿಂದ ತಲಪಾಡಿವರೆಗಿನ ರಸ್ತೆಬದಿ ಅಂಗಡಿಗಳೆಲ್ಲವನ್ನೂ ತೆರವುಗೊಳಿಸಲಾಗುವುದು. ನೋಟೀಸ್ ಎರಡು ಬಾರಿ ನೀಡಲಾಗಿದೆ, ಇಂದು ತೆರವು
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಮಾಡಿರುವ ಮನವಿಗೆ ಸ್ಪಂಧಿಸಿ ಗಡುವು ನೀಡಿ, ಸಹಿ ಪಡೆಯಲಾಗಿದೆ. 150 ಅಂಗಡಿಗಳಷ್ಟು ಗೂಡಂಗಡಿ ಇಟ್ಟವರು ಒಳಬಾಡಿಗೆಗೆ ಕೊಟ್ಟವರಿದ್ದಾರೆ. ಇನ್ನು ಹಲವರು ನ್ಯಾಯಾಲಯದ ಆದೇಶ ಬರುತ್ತಿದ್ದಂತೆ 1ರಿಂದ 3 ಲಕ್ಷ ರೂ.ಗೆ ಮಾರಿ ಹೋದವರಿದ್ದಾರೆ. ಬಡವರನ್ನು ಮೋಸ ಮಾಡಿದ ಅನೇಕ ಪ್ರಕರಣಗಳಿವೆ. ಸದ್ಯ ಉಡುಪಿ ಟೋಲ್ ಗೇಟ್ ಪ್ರೈ.ಲಿ ಸಂಸ್ಥೆ ರಾ.ಹೆ.ಗುತ್ತಿಗೆಯನ್ನು ವಹಿಸಿದ್ದು, ಡಿಸೈನ್ ಒಳಗೆ ಬರುವಂತಹ ಎಲ್ಲಾ ಕಾಮಗಾರಿಗಳನ್ನು ಸಂಸ್ಥೆ ಕೈಗೆತ್ತಿಕೊಂಡಿದ್ದು, ಹೆದ್ದಾರಿ ಬದಿಯ ದಾರಿದೀಪಗಳನ್ನು ಎಲ್ ಇಡಿಗೆ ಪರಿವರ್ತನೆಗೊಳಿಸಲಾಗುವುದು. ತೊಕ್ಕೊಟ್ಟು ಜಂಕ್ಷನ್ ಸರ್ವಿಸ್ ರಸ್ತೆ, ಚರಂಡಿ ಕಾಮಗಾರಿಯ ಕುರಿತು ಈ ಮಳೆಗಾಲದಲ್ಲಿ ವರದಿ ಸಂಗ್ರಹಿಸಿ ಮುಂದಿನ ಮಳೆಗಾಲದ ಸಂದರ್ಭ ದುರಸ್ತಿಗೊಳಿಸಲಾಗುವುದು.ಎಂದುಟೋಲ್ ಮುಖ್ಯಸ್ಥರು ಮನವರಿಕೆ ಮಾಡಿ ಸ್ಥಳೀಯ ವ್ಯಾಪಾರಸ್ಥರನ್ನ ಮನವಿ ಮಾಡಿದರು.



