
9ನೇ ತರಗತಿ ಓದುತ್ತಿದ್ದ ಶೃಂಗೇರಿಯ 15 ವರ್ಷದ ಬಾಲಕಿ ಮೇಲೆ 52 ಜನ 5 ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿಶೇಷ ಪೋಕ್ಸೋ ನ್ಯಾಯಾಲಯ ಆಕೆಯ ತಾಯಿ ಸೇರಿ ನಾಲ್ವರು ದೋಷಿಗಳೆಂದು ತೀರ್ಪು ನೀಡಿದೆ. ಸೋಮವಾರ ನಾಲ್ವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರತ್ಯೇಕ ದೂರುಗಳು ದಾಖಲಾದ ಕಾರಣ 39 ಪ್ರಕರಣಗಳು ದಾಖಲಾಗಿತ್ತು. ಸಾಕು ತಾಯಿಯೇ ತನ್ನ 15 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದಳು. ನ್ಯಾಯಾಲಯ ಮೂರು ವರ್ಷಗಳ ಕಾಲ ಪ್ರತಿಯೊಂದು ಎಫ್‌ಐಆರ್ ಅನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿತ್ತು. 53 ಜನರ ಪೈಕಿ 49 ಜನ ನಿರ್ದೋಷಿಗಳು ಎಂದು ತೀರ್ಮಾನಿಸಿದೆ.


